ನಮ್ಮ ಪಕ್ಷಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದೆ : ಉಪೇಂದ್ರ
'ಸಂವಿಧಾನಕ್ಕನುಗುಣವಾಗಿ ಅರ್ಜಿಯಲ್ಲಿ ಜಾತಿ ಕಾಲಂ ಇಟ್ಟಿದ್ದೇವೆ ಆದರೆ ನಮ್ಮ ಪಕ್ಷದಲ್ಲಿ ಜಾತಿ ವರ್ಗಕ್ಕೆ ಯಾವುದೇ ಸ್ಥಾನ ಇಲ್ಲ. ಎಲ್ಲರೂ ಯಾವುದೇ ಸ್ಥಾನಮಾನದ ಆಸೆ ಇಲ್ಲದೆ ನಾಡಿನ ಏಳಿಗೆಗಾಗಿ ಕೆಲಸಮಾಡುವುದು ಗುರಿ' ಎಂದರು. ಮೈಕೋ ನವೀನ್ ಮತ್ತು ಸ್ನೇಹಿತರು ಡಿಸೈನ್ ಮಾಡಿದ ಪಕ್ಷದ https://www.kpjpuppi.org ವೆಬಸೈಟನ್ನೂ ಬಿಡುಗಡೆ ಮಾಡಿದರು.
ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯಥಿರಗಳು ಕಣಕ್ಕಿಳಿಯುತ್ತಾರೆ. ನಾನು ಎಲ್ಲಿಂದ ಸ್ಪರ್ಧಿಸುತ್ತೇನೆ ಎಂದು ಸದ್ಯದಲ್ಲೇ ತಿಳಿಸುತ್ತೇನೆ' ಎಂದರು. ಮೈಕೋ ನವೀನ್ ಮತ್ತು ಸ್ನೇಹಿತರು ಡಿಸೈನ್ ಮಾಡಿದ ಪಕ್ಷದ https://www.kpjpuppi.org ವೆಬಸೈಟನ್ನೂ ಬಿಡುಗಡೆ ಮಾಡಿದರು. ಇದರಲ್ಲಿ ಎಲ್ಲಾ ಮಾಹಿತಿ ಲಭ್ಯವಿದ್ದು, ಅಭ್ಯರ್ಥಿಗಳಾಗಬಯಸುವವರು ಅರ್ಜಿ ಯನ್ನು ಇಲ್ಲೆ ಸಲ್ಲಿಸಬೇಕು'. ವೇದಿಕೆಯಲ್ಲಿ ಕುರ್ಚಿಗಳನ್ನು ಖಾಲಿ ಬಿಡಲಾಗಿದ್ದು ಇದು ಅಭ್ಯರ್ಥಿಗಳಿಗಾಗಿ ಖಾಲಿ ಬಿಡಲಾಗಿದೆ ಎಂದರು. ಬಿಜೆಪಿಗರ ಆಕ್ರೋಶಕ್ಕೆ ಕಾರವಾದ ಬಗ್ಗೆ ಪ್ರತಿಕ್ರಿಯೆ ನೀಡಿ ಬಿಜೆಪಿಗರು ನನ್ನನ್ನು ತಪ್ಪಾಗಿ ತಿಳಿದುಕೊಂಡಿದ್ದರು. 'ಯಾರೋ ಮಾಡಿದ ವಿಡಿಯೋಗೆ ನನ್ನನ್ನು ಟೀಕಿಸಿದರು. ಅವರಿಗೆ ವಾಸ್ತವ ತಿಳಿಸಿದ್ದು, ಈಗ ಎಲ್ಲವೂ ಸರಿ ಹೋಗಿದೆ. ನಾನು ಯಾರನ್ನೂ ದೂಷಿಸುವುದಿಲ್ಲ' ಎಂದರು.
Comments