ಉಪೇಂದ್ರ ಪಕ್ಷದಿಂದ ನೂತನ ವೆಬ್ ಸೈಟ್ ಲೋಕಾರ್ಪಣೆ
'ಕೆಪಿಜೆಪಿ ಪ್ರಜಾಕೀಯ' ಹೆಸರಿನಲ್ಲಿ ಉಪೇಂದ್ರ ಅವರ ವೆಬ್ ಸೈಟ್ ಬಿಡುಗಡೆಯಾಗಿದ್ದು, 'ಕೆಪಿಜೆಪಿ' ಪಕ್ಷದ ಗುರಿ, ಪಕ್ಷದ ಚಟುವಟಿಕೆಗಳು ಹೇಗಿರಬೇಕು. ಜನರನ್ನ ತಲುಪುವುದು ಹೇಗೆ ಎಂಬ ಎಲ್ಲ ವಿವರಗಳು ಇಲ್ಲೇ ಸಿಗಲಿದೆ.
ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅಧ್ಯಕ್ಷ ಉಪೇಂದ್ರ ಅವರು ತಮ್ಮ ನೂತನ ವೆಬ್ ಸೈಟ್ ಲೋಕಾರ್ಪಣೆ ಮಾಡಿದ್ದಾರೆ. ಇನ್ಮುಂದೆ ಕೆಪಿಜೆಪಿ ಪಕ್ಷ ಹಾಗೂ ಉಪೇಂದ್ರ ಅವರು ಎಲ್ಲ ಕಾರ್ಯಕ್ರಮಗಳನ್ನ ಈ ವೆಬ್ ಸೈಟ್ ನಲ್ಲಿ ನೋಡಬಹುದು. ಕೆಪಿಜೆಪಿ ಪ್ರಜಾಕೀಯ' ಹೆಸರಿನಲ್ಲಿ ಉಪೇಂದ್ರ ಅವರ ವೆಬ್ ಸೈಟ್ ಬಿಡುಗಡೆಯಾಗಿದ್ದು, 'ಕೆಪಿಜೆಪಿ' ಪಕ್ಷದ ಗುರಿ, ಪಕ್ಷದ ಚಟುವಟಿಕೆಗಳು ಹೇಗಿರಬೇಕು. ಜನರನ್ನ ತಲುಪುವುದು ಹೇಗೆ ಎಂಬ ಎಲ್ಲ ವಿವರಗಳು ಇಲ್ಲೇ ಸಿಗಲಿದೆ. ಇನ್ನು ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದುಕೊಂಡಿರುವವರು ಈ ವೆಬ್ ಸೈಟ್ ನಲ್ಲಿ ತಮ್ಮ ವಿವರವನ್ನ ಅಪ್ ಡೇಟ್ ಮಾಡಬೇಕು ಎಂದು ತಿಳಿಸಿದರು. ಇನ್ನು ಚುನಾವಣ ಆಯ್ಕೆ ಬಗ್ಗೆ ಮಾತನಾಡಿದ ಉಪೇಂದ್ರ '' ಎಲ್ಲ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಅಭ್ಯರ್ಥಿಗಳ ಆಯ್ಕೆಗೆ ಇಂತದ್ದೇ ಎಂಬ ಮಾನದಂಡವಿಲ್ಲ. ಅವಿದ್ಯಾವಂತರಿಗೂ ಪಕ್ಷದಲ್ಲಿದೆ ಅವಕಾಶವಿದೆ. ಒಂದು ತಿಂಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಡೆಡ್ ಲೈನ್ ಎಂದುಕೊಂಡಿದ್ದೇವೆ. ನಮ್ಮ ಪಕ್ಷದಲ್ಲಿ ಜಾತಿ, ವರ್ಗಕ್ಕೆ ಅವಕಾಶವಿಲ್ಲ'' ಎಂದು ಉಪ್ಪಿ ತಿಳಿಸಿದ್ದಾರೆ. ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವವರು ''ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದಕ್ಕೆ ಪರಿಹಾರ ಕೂಡಾ ಪಟ್ಟಿ ಮಾಡಿ ಕಳುಹಿಸಿ. ಯಾವುದೇ ವಿದ್ಯಾರ್ಹತೆಯ ಗ್ರಾಮ ಪಂಚಾಯ್ತಿ, ನಗರ ಸಭೆ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಶಾಸಕ ಸದಸ್ಯರು ನಮ್ಮ ವೆಬ್ ಗೆ ಡಿಟೇಲ್ಸ್ ಕಳಿಸಬಹುದು ಎಂದು ಬಹಿರಂಗ ಆಹ್ವಾನ ನೀಡಿದ್ದಾರೆ.
Comments