ಉಪ್ಪಿಯ ಕೆಪಿಜೆಪಿ ಪಕ್ಷದ ಕಾರ್ಯಕರ್ತರು ಹೇಗಿರಬೇಕು?

ಪ್ರಜಾಕೀಯ ಆರಂಭಿಸಿದಾಗಿನಿಂದ ಜನರು ಉತ್ತಮವಾಗಿ ನನ್ನನ್ನು ಬೆಂಬಲಿಸಿದ್ದಾರೆ. ರಾಜಕೀಯ ಎಂಬು ಕಾನ್ಸೆಪ್ಟ್ ಬದಲಾಯಿಸುವುದು ನಮ್ಮ ಉದ್ದೇಶ. ಪ್ರಾಬ್ಲಮ್ ಸಾವಿರಾರು ಇದೆ, ಅದಕ್ಕೆ ಸಲ್ಯೂಷನ್ ಕೂಡ ನಮ್ಮ ಹತ್ತಿರವೇ ಇರೋದು. ನಮಗೆ ರಾಜಕೀಯ ಬೇಡ ಪ್ರಜಾಕೀಯ ಬೇಕು. ನಾವು ಪ್ರಜಾಕೀಯ ಎಂದರೆ ಏನು ಅಂತ ಅರ್ಥಮಾಡಿಕೊಳ್ಳುವುದೇ ಕಷ್ಟ.
ಯಾಕಂದ್ರೆ ನಾವು ಅದರಿಂದ ತುಂಬಾ ದೂರ ಹೋಗಿದಿವಿ. ನಮಗೆ ರಾಜಕೀಯ ಅಭ್ಯಾಸವಾಗಿದೆ. ನಾವು ಕುತ್ಕೊಂಡ್ತಿವಿ ನಮಗೆ ಯಾರೋ ಒಬ್ಬ ರಾಜಬೇಕು. ಅವನಿಗೆ ಪ್ರಶ್ನೆ ಮಾಡುತ್ತೇವೆ.ಏನಪ್ಪಾ ಏನು ಮಾಡ್ತಿಲ್ಲ ನೀನು ಅಂತ ಏನು ಮಾಡಲೇ ಇಲ್ಲ ಅಂತ ಇದು ನಮಗೆ ಬಹಳ ಅಭ್ಯಾಸವಾಗಿದೆ. ನನ್ನ ಕೆಲಸವನ್ನು ಯಾರೋ ಮಾಡಬೇಕು, ಆದ್ರೆ ಪ್ರಜಾಕೀಯ ಅದಲ್ಲ. ನೀವುಗಳು ಎಲ್ಲರು ಜೊತೆ ಸೇರಿ ಮಾಡಬೇಕು. ಬಹಳ ವಿಶೇಷ , ವೈಶಿಷ್ಟ್ಟವಾದದ್ದು , ಬಹಳ ಕಷ್ಟಕರವಾದದ್ದು,ಕೂಡ ಯಾರೋ ಒಬ್ಬರು ಮಾಡಿ ನಾವು ನಿಮ್ಮ ಹಿಂದೆ ಇರುತ್ತೇವೆ ಎಂದು ಹೇಳುವುದಲ್ಲ. ಜೊತೆ ಸೇರಿ ಕೆಲಸ ಮಾಡುವುದು. ತುಂಬಾ ಜನ ಕೇಳ್ತಾರೆ ದುಡ್ಡಿಲ್ಲದೆ ಹೇಗೆ ಪಾರ್ಟಿ ಶುರು ಮಾಡ್ತೀರಾ ಅಂತ ಪ್ರಶ್ನೆ ಕೇಳಿದ್ರು ಅದಕ್ಕೆ ನಾನು ಹೇಳಿದೆ ನನಗೆ ಮೊದಲು ಅರ್ಥವಾಗಬೇಕು. ಆ ಮೇಲೆ ಬೇರೆಯವರಿಗೆ ಅರ್ಥವಾಗುತ್ತದೆ. ಗೆಲುವು ಮೊದಲು ನಮ್ಮಿಂದ ಪ್ರಾರಂಭವಾಗಬೇಕು. ಮೊದಲು ನಾನು ನಂಬಬೇಕು. ನಂತರ ಆ ನಂಬಿಕೆ ಇನ್ನೊಬ್ಬರಿಗೆ ನಂಬಿಕೆ ತರಿಸುತ್ತದೆ. ದಯವಿಟ್ಟು ನನ್ನನ್ನು ಲೀಡರ್ ಮಾಡಬೇಡಿ. ನಿಮ್ಮೆಲ್ಲರ ಜೊತೆ ಸೇರಿ ಮಾಡುವ ಕಾರ್ಯವಿದು. ಜನರಿಗೆ ಈ ಕಾನ್ಸೆಪ್ಟ್ ಜನರಿಗೆ ಹೇಗೆ ರೀಚ್ ಮಾಡೋದು. 224 ಜನರನ್ನು ನಿಲ್ಲಿಸುತ್ತೇವೆ.
ಅವರ ಬಗ್ಗೆ ಜನರಿಗೆ ಗೊತ್ತಾಗ ಬೇಕಲ್ವಾ . ದುಡ್ಡಿರೋರು ಫೇಮಸ್ ವ್ಯೆಕ್ತಿಗಳು ನಿಂತಿರುತ್ತಾರೆ. ಅವರೆದುರು ನಮ್ಮ ಕಾರ್ಯ ಕರ್ತರನ್ನು ನಿಲ್ಲಿಸುತ್ತೇವೆ. ಆಗ ನಮಗೆ ಅನಿಸುತ್ತೆ ದೊಡ್ಡವರ ಮುಂದೆ ಹೇಗೆ ಗೆಲ್ಲುತ್ತಾರೆ ಅಂತ ನಮಗೆ ಇವಾಗ 224 ಜನ ಸೈನಿಕರು ಬೇಕಾಗಿದ್ದಾರೆ ನಿಜವಾಗಲೂ ಕೆಲಸ ಮಾಡುತ್ತೇನೆ ಅನ್ನೋರು ಅವರ ಹಿಂದೆ ನಿಜವಾಗಿಯೂ ಕೆಲಸವನ್ನು ಹಬ್ಬಿಸುತ್ತೇವೆ ಅನ್ನೋರು. ಇದಕ್ಕೆ ದುಡ್ಡು ಬೇಕಾಗಿಲ್ಲ . ಒಬ್ಬರು ಮನೆಯಲ್ಲಿರುವ 4 ಜನರನ್ನು ಚೇಂಜ್ ಮಾಡಿದರೆ ಸಾಕು ಈ ಮೂರುತಿಂಗಳಲ್ಲಿ ಎಷ್ಟ್ಟು ಜನರು ಚೇಂಜ್ ಆಗುತ್ತಾರೆ. ನಾವು ಟ್ಯಾಕ್ಸ್ ಕಟ್ಟಿರೋ ದುಡ್ಡು ಅಲ್ಲಿದೆ ಅದನ್ನು ಸರಿಯಾಗಿ ತಲುಪಿಸಬೇಕು. ಇದು ಹನ್ ಡ್ರೆಡ್ ಪರ್ಸೆಂಟ್ ಜನರಿಗೆ ಟ್ರಾನ್ಸ್ಪೆರಾಗಿರ್ಬೇಕು. ಒಂದು ರೈಡ್ ಆದ್ರೆ ಪ್ರಜೆಗಳಿಗೆ ಎಲ್ಲವು ತಿಳಿಯಬೇಕು. ಕೋರ್ಟ್ ನಲ್ಲಿ ನಡೆಯೋ ಎಲ್ಲ ವಿಜಾರಣೆಗೆಳು ಪ್ರಜೆಗಳಿಗೆ ಗೊತ್ತಾಗಬೇಕು. ಈ ರೀತಿಯ ಪ್ರಾಬ್ಲಮ್ ಇದೆ ನಾನು ನಿಂತುಕೊಂಡು ಈ ಕೆಲಸ ಮಾಡುತ್ತೀನಿ ಡಾಕ್ಯುಮೆಂಟೇಷನ್ ಸಮೇತ ತಗೊಂಡು ಬನ್ನಿ ಇದನ್ನೇ ನಾನು ಜನಗಳ ಮುಂದೆ ಇಡುತ್ತಿದ್ದೇನೆ. ಆದ್ರೆ ನೀವು ಗೆದ್ದ ಮೇಲೆ ರಾಜರಾಗಲು ಸಾಧ್ಯವಿಲ್ಲ. ಖಾಕಿ ಬಟ್ಟೆ ಹಾಕಿಕೊಂಡು ಕೆಲಸಕ್ಕೆ ಇಳಿಯಬೇಕು. ರಾಜಕೀಯಕ್ಕೆ ಬರಲು ಬಹಳ ಭಯವಿದೆ. ಇಲ್ಲಿ ಎಲ್ಲಾ ಸ್ಯಾಕ್ರಿಫೈಜ್ ಮಾಡ್ಕೊಂಡು ಬರಬೇಕು ಅಂತ ಎಲ್ಲಾ ಬಿಟ್ಟು ರಾತ್ರಿ ಹಗಲು ಕೆಲಸ ಮಾಡಬೇಕು ಅಂತ ಅದು ತಪ್ಪು , ಬೇಡ 9 ಟು 6 ಕರೆಕ್ಟಾಗಿ ಕೆಲಸ ಮಾಡಿ ಆಮೇಲೆ ನಿಮ್ಮ ಕುಟುಂಬದವರ ಜೊತೆ ಸಂಡೆ ರಾಜ ತಗೊಂಡು ಅವರ ಜೊತೆ ಇರಿ. ನಾವು ಇದನ್ನ ಮಾಡ್ತಿದಿವಿ ಸರಿನಾ , ತಪ್ಪಾ ನೋಡಿ ಓಟು ಹಾಕಿ ಸಪೋರ್ಟ್ ಮಾಡಿ ಎಂದು ಉಪ್ಪೆನ್ದ್ರ ತಮ್ಮ ಭಾಷಣದ ಮೂಲಕ ಜನರಿಗೆ ತಾವು ಏನು ಮಾಡಲು ಹೊರಟ್ಟಿದ್ದೇವೆ ಎಂಭುದರ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದ್ದಾರೆ.
Comments