ಬಾಲಕೃಷ್ಣ ವಿರುದ್ಧ ಸ್ಪರ್ಧಿಸಲು ಜೆಡಿಎಸ್ ಅಭ್ಯರ್ಥಿ ಫೈನಲ್

11 Nov 2017 9:27 AM |
694 Report

ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ನ ಜೆಪಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಎಚ್. ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಮಾಗಡಿ ಜಿಲ್ಲಾ ಪಂಚಾಯಿತಿ ಸದಸ್ಯ ಎ. ಮಂಜು (ಮಂಜುನಾಥ್) ಜೆಡಿಎಸ್ ಗೆ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, 'ಜೆಡಿಎಸ್ ಅಮಾನತು ಶಾಸಕ ಮಾಗಡಿ ಬಾಲಕೃಷ್ಣ ವಿರುದ್ಧ ಜೆಡಿಎಸ್ ನಿಂದ ಈ ಬಾರಿ ಎ.ಮಂಜುನಾಥ್ (ಎ.ಮಂಜು) ಸ್ಪರ್ಧೆ ಮಾಡಲಿದ್ದಾರೆ' ಎಂದು ಘೋಷಿಸಿದರು.ಮಂಜು ಕಾಂಗ್ರೆಸ್ ತೊರೆದು ಇಂದು ಜೆಡಿಎಸ್ ಸೇರಿದ್ದಾರೆ. ಮಾಗಡಿಯಲ್ಲಿ ಎ.ಮಂಜುನಾಥ್ ಬೃಹತ್ ಸಮಾವೇಶ ನಡೆಸಲಿದ್ದಾರೆ ಎಂದರು.ಕೈ ಪಾಳಯಕ್ಕೆ ಜಿಗಿದಿರುವ ಜೆಡಿಎಸ್ ಭಿನ್ನಮತೀಯ ಶಾಸಕ ಬಾಲಕೃಷ್ಣ ಅವರಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ನ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜು ಅವರನ್ನು ಜೆಡಿಎಸ್ ಸೆಳೆದಿದೆ.

Edited By

Shruthi G

Reported By

hdk fans

Comments