ಚಿಕ್ಕಪ್ಪರ ನಿರ್ಧಾರಕ್ಕೆ ನಾನು ಬದ್ಧ, ಪ್ರಜ್ವಲ್ ರೇವಣ್ಣ ಪ್ರತಿಕ್ರಿಯೆ

ಕೆ.ಆರ್.ಪೇಟೆ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಯಾರಿಗೇ ಟಿಕೆಟ್ ನೀಡದರೂ, ಪಕ್ಷದ ಅಭ್ಯರ್ಥಿ ಗೆಲ್ಲುವು ಖಚಿತ ಎಂದು ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ನಾನು ಕೂಡಾ ಜೆಡಿಎಸ್ ಟಿಕೆಟ್ ಆಕಾಂಕ್ಷಿ. ಆದರೆ, ಟಿಕೆಟ್ ಬೇಕೇ ಬೇಕೆಂದು ಯಾರ ಮೇಲೂ ಒತ್ತಡ ಹಾಕುತ್ತಿಲ್ಲ' ಎಂದು ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಸ್ಪಷ್ಟಪಡಿಸಿದ್ದಾರೆ.ಕೆ.ಆರ್.ಪೇಟೆ ತಾಲೂಕಿನ ಅರಳಕುಪ್ಪೆ ಗ್ರಾಮಕ್ಕೆ ಪ್ರಜ್ವಲ್ ರೇವಣ್ಣ ಭೇಟಿ ನೀಡಿ ಮಾತನಾಡಿದರು.ಈ ಬಾರಿಯ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಬೇಡ ಎಂದರೂ ಸಂತೋಷವಾಗಿಯೇ ಒಪ್ಪಿಕೊಳ್ಳುತ್ತೇನೆ. ಸ್ಪರ್ಧೆ ಮಾಡು ಎಂದರೆ, ಅದಕ್ಕೂ ಸಿದ್ಧ. ಒಟ್ಟಾರೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ, ಏನೇ ಆದರೂ ನಾನು ಜೆಡಿಎಸ್ ಸಂಘಟನೆಗೆ ಸಿದ್ಧ. ಎಚ್ ಡಿಕೆ ನನ್ನ ಚಿಕ್ಕಪ್ಪ ಅಲ್ಲದೆ ಅವರ ನಿರ್ಧಾರ ಮುಖ್ಯ ಎಂದು ಪ್ರಜ್ವಲ್ ಹೇಳಿದ್ದಾರೆ.
Comments