ವಿಕಾಸ ಯಾತ್ರೆ’ಗೆ ಜ್ವಾಲಾಮುಖಿ ತ್ರಿಪುರ ಸುಂದರಿದೇವಿಯ ಅಪ್ಪಣೆ ಏನು?
ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಅವರು ವಿಕಾಸ ಯಾತ್ರೆಗೆ ಅಧಿಕೃತ ಚಾಲನೆ ನೀಡಿದರು. ದೇವೇಗೌಡ ಹಾಗೂ ಚನ್ನಮ್ಮ ದಂಪತಿ ಸಂಕಲ್ಪ ನೆರವೇರಿಸಿದರು.
ರಾಜ್ಯದಾದ್ಯಂತ ಪ್ರಚಾರ ಯಾತ್ರೆಗಾಗಿ ರೂಪಿಸಿರುವ ಹೈಟೆಕ್ ಬಸ್ಸಿನ ಮೇಲೇರಿದ ಕುಮಾರಸ್ವಾಮಿ ಅವರು ದೇಗುಲದ ಒಂದು ಸುತ್ತು ಬಂದರು. ಪತ್ನಿ ಅನಿತಾ ಜೊತೆಗಿದ್ದರು. ಬಳಿಕ ಪೋಷಕರು ಹಾಗೂ ಪತ್ನಿ ಜೊತೆ ಉತ್ತನಹಳ್ಳಿಗೆ ತೆರಳಿ ಜ್ವಾಲಾಮುಖಿ ತ್ರಿಪುರ ಸುಂದರಿದೇವಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅಪ್ಪಣೆ ಕೇಳಿದರು. ದೇವಿಯ ಮೇಲಿನ ಹೂವು ಬಲಗಡೆಗೆ ಬಿದ್ದಿದ್ದರಿಂದ ಎಲ್ಲರ ಮೊಗದಲ್ಲಿ ಖುಷಿ ಮೂಡಿತು. ಈ ವಿಚಾರವನ್ನು ಸಮಾವೇಶದ ವೇಳೆ ಶಾಸಕ ಜಿ.ಟಿ.ದೇವೇಗೌಡ ಅವರು ಕೂಡ ಹಂಚಿಕೊಂಡರು.
Comments