ನೋಟ್ ಬ್ಯಾನ್ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?

ನೋಟ್ ಬ್ಯಾನ್ ಆಗಿ ಒಂದು ವರ್ಷ ಆಗಿದೆ, ಆದರೆ ದೇಶದ ಜನತೆಗೆ ಪ್ರಧಾನಿ ಮೋದಿ ಕೊಟ್ಟ ಭರವಸೆ ಈಡೇರಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಹಿಂದೆ ನೋಟು ಬ್ಯಾನ್ ಗೆ ಬೆಂಬಲ ನೀಡಿದವರು ಇಂದು ಅದರ ವಿರುದ್ಧವೇ ಮಾತನಾಡುತ್ತಿದ್ದಾರೆ. ಇದರಿಂದ ವ್ಯಾಪಾರಸ್ಥರು ಮತ್ತು ರೈತರ ಮೇಲೆ ಕೆಟ್ಟ ಪರಿಣಾಮ ಬೀರಿದೆ. ವರ್ಡ್ ಬ್ಯಾಂಕ್ ನೀಡುವ ಸರ್ಟಿಫಿಕೆಟ್ ನಲ್ಲಿ ಕೃತಕತೆ ಇರುತ್ತದೆ. ನೋಟ್ ಬ್ಯಾನ್ ಬಗ್ಗೆ ಪ್ರಧಾನಿ ಮಂತ್ರಿ ಅತ್ಯಂತ ಬಾಲಿಶ ಹೇಳಿಕೆ ನೀಡಿದ್ದು, ತಿಳಿವಳಿಕೆ ಇಲ್ಲದವರು ಮಾಡುವಂತಹ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.ಇನ್ನು ಕುಮಾರಸ್ವಾಮಿ ಅವರು ಚಿಕ್ಕಮಗಳೂರಿನ ಮುಗುವಳ್ಳಿ ಗ್ರಾಮದಲ್ಲಿ ದಲಿತ ಕುಟುಂಬ ಧರ್ಮಪಾಲ್ ಅವರ ಮನೆಯಲ್ಲಿ ಕಳೆದ ರಾತ್ರಿಯಿಂದ ವಾಸ್ತವ್ಯ ಮಾಡಿದ್ದಾರೆ.
Comments