ರೆಬಲ್ ಶಾಸಕರಿಗೆ ಖಡಕ್ ಎಚ್ಚರಿಕೆ ಕೊಟ್ಟ ಎಚ್ ಡಿಕೆ
ಕ್ಷೇತ್ರದಲ್ಲಿ ಮತದಾರರೇ ಪಕ್ಷಕ್ಕೆ ದೊಡ್ಡ ಗೆಲುವು ತಂದು ಕೊಟ್ಟಿದ್ದಾರೆ ಅವರು ಮುಂದೆಯೂ ಜೆಡಿಎಸ್ ನ್ನು ಕೈ ಬಿಡುವುದಿಲ್ಲ ಎಂದು ಜಾತ್ಯತೀತ ಜನತಾ ದಳದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರ ಸ್ವಾಮಿ ರೆಬೆಲ್ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಪೂಜೆ ಸಲ್ಲಿಸಿ, 'ಕುಮಾರ ಪರ್ವ'ದ ಯಶಸ್ಸಿಗೆ ಪ್ರಾರ್ಥಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ ಸ್ವಾಮಿ ಅವರು ಜೆಡಿಎಸ್ ನಲ್ಲಿರುವ ಭಿನ್ನಮತೀಯ ಶಾಸಕರು ನನಗೆ ಸವಾಲೇ ಅಲ್ಲ. ಭಿನ್ನಮತೀಯ ಶಾಸಕರು ಇರುವ ಕ್ಷೇತ್ರಗಳಲ್ಲಿ ಜೆಡಿಎಸ್ ನ ಗೆಲುವಿಗೆ ಮತದಾರರು ಕಾರಣರಾಗಿದ್ದಾರೆ."ಕುಮಾರ ಪರ್ವದ ಮೂಲಕ ರಾಜ್ಯದ ಜನರಿಗೆ ಜೆಡಿಎಸ್ ನ ಸಂದೇಶ ನೀಡಲಾಗುವುದು. ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ರಾಜ್ಯದಲ್ಲಿ ಅನ್ನದಾತರ ಸರಣಿ ಆತ್ಮಹತ್ಯೆ ನಿಲ್ಲಬೇಕು" ಎಂದರು. ಈ ಮೊದಲು ಜೆಡಿಎಸ್ ಇತರೆ ಪಕ್ಷಗಳ ಸಾಲಿನಲ್ಲಿ ಇತ್ತು. ಆದರೆ ಸಮೀಕ್ಷೆಯಲ್ಲಿ 60ಕ್ಕೇರಿದೆ. ಇದನ್ನು 113ಕ್ಕೆ ಏರಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಧ್ಯೇಯ . ರಾಜ್ಯದ 6 ಕೋಟಿ ಜನರ ವಿಶ್ವಾಸದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶವಾಗಿದೆ. ಇದೇ ಕಾರಣಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ ಎಂದು ಹೇಳಿದರು.
Comments