ಎಚ್‍ಡಿ ದೇವೇಗೌಡರ ಮಿಮಿಕ್ರಿ ಬಗ್ಗೆ ನಟ ಜಗ್ಗೇಶ್ ಸ್ಪಷ್ಟನೆ

ಕರ್ನಾಟಕ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ ಅಂಗವಾಗಿ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ನಟ ಜಗ್ಗೇಶ್ ದೇವೇಗೌಡರ ಮಾತಿನ ಶೈಲಿಯನ್ನು ಮಿಮಿಕ್ರಿ ಮಾಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು ನಟ ಜಗ್ಗೇಶ್ ಇದೀಗ ಈ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಕುಮಾರಣ್ಣ ನಮ್ಮ ನಿರ್ಮಾಪಕರು ಅಂತಾ ಶರವಣಗೆ ವಾಟ್ಸಾಪ್‍ನಲ್ಲಿ ಸಂದೇಶ ಕಳುಹಿಸಿದ್ದಾರೆ. ಈ ಸಂಬಂಧ ಫೇಸ್‍ಬುಕ್‍ನಲ್ಲಿ ಹಾಕಿಕೊಂಡಿರೋ ಪರಿಷತ್ ಸದಸ್ಯ ಶರವಣ, ನಿಮ್ಮ ಪ್ರತಿಕ್ರಿಯೆಗೆ ಕೃತಜ್ಞತೆಗಳು ಅಂತಾ ತಿಳಿಸಿದ್ದಾರೆ. 1990 ರಿಂದಲೂ ನಾನು ಎಚ್ ಡಿ ದೇವೇಗೌಡರ ಅಭಿಮಾನಿ. ಜೆಡಿಎಸ್ ಗೆ ಮತಹಾಕಿ ಎಂದು ದೇವೇಗೌಡರು ಕೇಳಿಕೊಂಡರೂ ಮಸಾಲೆ ಜಯರಾಮ್ ಗೆ ಮತಹಾಕಿ. ಕಾರಣ ಮಸಾಲೆ ಜಯರಾಮ್ ಕೂಡಾ ಒಕ್ಕಲಿಗರು ಅಂತಾ ಪಕ್ಷದ ಕಾರ್ಯಕರ್ತನಾಗಿ ಹೇಳಿದ್ದೇನೆ. ಆದ್ರೆ, ಒಂದೇ ಒಂದು ಎಚ್‍ಡಿ ದೇವೇಗೌಡರ ವಿರುದ್ಧದ ಹೇಳಿಕೆಯನ್ನ ನಾನು ನೀಡಿಲ್ಲ ಅಂತಾ ಜಗ್ಗೇಶ್ ಸ್ಪಷ್ಟಪಡಿಸಿದ್ದಾರೆ. ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರ ಮೇಲೆ ನನಗೆ ಅಪಾರ ಗೌರವವಿದೆ. ನಾನು ಅವರ ವಿರುದ್ಧ ಒಂದೇ ಒಂದು ಪದವನ್ನೂ ಮಾತನಾಡಿಲ್ಲ ಅಂತಾ ನಟ ಜಗ್ಗೇಶ್ ಸ್ಪಷ್ಟಪಡಿಸಿದ್ದಾರೆ.
Comments