ಜೆಡಿಎಸ್ ಅಭಿಮಾನಿಗಳು ಮತ್ತು ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿ ತನ್ನ ತನ ಮೆರೆದ ಎಚ್ ಡಿ ಕೆ

ಅನಾರೋಗ್ಯದ ಕಾರಣದಿಂದ ಚಿಕ್ಕಮಾದು ಅವರ ಅಂತ್ಯಕ್ರಿಯೆ ಯಲ್ಲಿ ನಾನು ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಕೆ.ಆರ್.ನಗರದಲ್ಲೇ ಅವರ ಅಂತಿಮ ದರ್ಶನ ಪಡೆಯುತ್ತಿದ್ದೇನೆ ಎಂದು ಅಭಿಮಾನಿಗಳು ಮತ್ತು ಜೆಡಿಎಸ್ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಅನಾರೋಗ್ಯದಿಂದ ನಿಧನರಾದ ಜೆಡಿಎಸ್ ಶಾಸಕ ಚಿಕ್ಕಮಾದು ಅವರ ಅಂತಿಮ ದರ್ಶನ ಪಡೆದರು. ಕೆ.ಆರ್.ನಗರದ ಬಯಲು ರಂಗಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಅಲ್ಲಿಗೆ ಆಗಮಿಸಿದ ಎಚ್.ಡಿ.ಕುಮಾರಸ್ವಾಮಿ, ಸಂಸದ ಪುಟ್ಟರಾಜು, ಶಾಸಕ ಸಾ.ರಾ.ಮಹೇಶ್ ಮತ್ತು ಮಧು ಬಂಗಾರಪ್ಪ ಶಾಸಕ ಚಿಕ್ಕಮಾದು ಅವರಿಗೆ ಅಂತಿಮನಮನ ಸಲ್ಲಿಸಿದರು.
ಇನ್ನು ನಮ್ಮ ತಂದೆ ಎಚ್.ಡಿ.ದೇವೆಗೌಡ ಅವರು ಸಹಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಹಾ ಆಗಮಿಸಿಲ್ಲ.ಹೀಗಾಗಿ ಚಿಕ್ಕಮಾದು ಅವರ ಕುಟುಂಬದವರು, ಪಕ್ಷದ ಕಾರ್ಯಕರ್ತರಲ್ಲಿ, ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತಿದ್ದೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
Comments