ಎಚ್ ಡಿಕೆ ರಾಜ್ಯ ಪ್ರವಾಸಕ್ಕೆ ಕರ್ನಾಟಕ ವಿಕಾಸ ವಾಹಿನಿ ಬಸ್ ನಲ್ಲಿರುವ ಸೌಲಭ್ಯಗಳೇನೇನು ಗೊತ್ತಾ ?

04 Nov 2017 5:09 PM |
841 Report

ಬಿಜೆಪಿ ರಥಯಾತ್ರೆಯ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ರಾಜ್ಯ ಪ್ರವಾಸಕ್ಕೆ'ಕರ್ನಾಟಕ ವಿಕಾಸ ವಾಹಿನಿ' ಹೆಸರಿನಲ್ಲಿ ವಿಶೇಷ ಬಸ್ ಸಿದ್ಧವಾಗಿದೆ.ಅತ್ಯಾಧುನಿಕ ಸೌಲಭ್ಯ ಹೊಂದಿರುವ ಬಸ್ ಕುಮಾರಸ್ವಾಮಿ ಅವರ ನಿವಾಸ ತಲುಪಿದೆ.

ಕುಮಾರಸ್ವಾಮಿ ಅವರ ರಾಜ್ಯ ಪ್ರವಾಸಕ್ಕೆ ಮಹೂರ್ತ ಫಿಕ್ಸ್ ಆಗಿದ್ದು, ವಿಶೇಷ ಬಸ್‌ಗೆ ಅವರು ಪೂಜೆ ಕೂಡ ಸಲ್ಲಿಸಿದ್ದಾರೆ. ಕುಮಾರಸ್ವಾಮಿ ಅವರು ಬಸ್ ವೀಕ್ಷಿಸಿ ತೃಪ್ತಿ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ವಿಕಾಸ ವಾಹಿನಿಯನ್ನು ಅಶೋಕ್ ಲೇಲ್ಯಾಂಡ್ ಕಂಪನಿ ರೂಪಿಸಿದ್ದು, ಬಸ್‌ನ ಚಾಸಿಸ್‌ ಅನ್ನು ಸೇಲಂನ ಸ್ಪೇಸ್ ಟೆಕ್ ಕಂಪನಿ ವಿನ್ಯಾಸಗೊಳಿಸಿದೆ. ಪ್ರಕಾಶ್ ಬಸ್ ಕವಚ ನಿರ್ಮಾಣ ಸಂಸ್ಥೆಯಲ್ಲಿ ಬಸ್‌‌ ಅನ್ನು ಸಿದ್ಧಪಡಿಸಲಾಗಿದೆ. ಬಸ್ ವಿನ್ಯಾಸಕ್ಕೆ 1ಕೋಟಿ ರೂ.ವ್ಯಯಿಸಲಾಗಿದ್ದು, ರೂಪಿಸಲು ಮೂರು ತಿಂಗಳು ತೆಗೆದುಕೊಳ್ಳಲಾಗಿದೆ. ಹಸಿರು ಮತ್ತು ಬಿಳಿ ಬಣ್ಣವನ್ನು ಹೊಂದಿರುವ ಬಸ್ ಒಳಗಡೆ ಸಂಪೂರ್ಣ ಹವಾ ನಿಯಂತ್ರಣ ವ್ಯವಸ್ಥೆ ಹೊಂದಿದೆ. ಬೆಡ್ ರೂಂ, ಬಾತ್ ರೂಂ, ಅಡುಗೆ ಕೋಣೆ ಕೂಡ ಇದೆ. ಮೂರು ಜನರನ್ನು ಬಸ್‌ನ ಮೇಲ್ಭಾಗಕ್ಕೆ ಎತ್ತುವ ಹೈಡ್ರಾಲಿಕ್ ಲಿಫ್ಟ್ ವೇದಿಕೆ ವ್ಯವಸ್ಥೆ ಕೂಡ ಇದರಲ್ಲಿದೆ. ಸುದ್ದಿ ವಾಹಿನಿಗಳ ವೀಕ್ಷಣೆಗೆ ಡಿಜಿಟಲ್ ಇಂಟರ್‌ನೆಟ್ ಟಿವಿ, ಹೋಂ ಥಿಯೇಟರ್ ಸೌಲಭ್ಯದ ಜತೆಗೆ ಮೂರ್ನಾಲ್ಕು ಜನ ಕುಳಿತು ಸಭೆ ನಡೆಸಲು ಅನುವಾಗುವಂತೆ ಸೋಫಾ ವ್ಯವಸ್ಥೆ, ಕುಮಾರಸ್ವಾಮಿ ಅವರಿಗೆ ಚಲಿಸುವ ವ್ಯವಸ್ಥೆ ಹೊಂದಿರುವ ವಿಶೇಷ ಆಸನವನ್ನೂ ಹೊಂದಿದೆ.

 

Edited By

hdk fans

Reported By

hdk fans

Comments