ರೈತರಿಗಿಲ್ಲ ರಾಜ್ಯೋತ್ಸವ ಪ್ರಶಸ್ತಿ : ಎಚ್ ಡಿಕೆ ಆಕ್ರೋಶ
ರಾಜ್ಯೋತ್ಸವ ಪ್ರಶಸ್ತಿಗೆ ಒಬ್ಬ ರೈತನೂ ಸಿಗಲಿಲ್ಲವೇ? ಕನ್ನಡ ನೆಲ, ಜಲ, ಭಾಷೆ ಉಳಿದಿದ್ದೇ ರೈತರಿಂದ. ರಾಜ್ಯದಲ್ಲಿ 80 ಲಕ್ಷ ರೈತ ಕುಟುಂಬಗಳಿವೆ ಪ್ರಶಸ್ತಿಗೆ ಆಯ್ಕೆ ಮಾಡಲು ಸರಕಾರಕ್ಕೆ ಒಬ್ಬ ರೈತನೂ ಸಿಕ್ಕಿಲ್ಲವೇ? ಸರಕಾರ ಈ ವಿಚಾರದಲ್ಲೂ ರೈತರನ್ನು ಮರೆತಿರೋದು ಯಾಕೆ, ಎಲ್ಲ ಕ್ಷೇತ್ರಗಳನ್ನು ಪರಿಗಣಿಸುವಾಗ ರೈತರು ಮಾತ್ರ ಸರಕಾರದ ಕಣ್ಣಿಗೆ ಬಿದ್ದಿಲ್ಲ. ಇದು ರೈತರ ಬಗ್ಗೆ ಇರುವ ರಾಜ್ಯ ಸರಕಾರದ ಧೋರಣೆ ತೋರಿಸುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ 80ಲಕ್ಷ ರೈತ ಕುಟುಂಬಗಳಿವೆ. ಆದರೂ ಪ್ರಶಸ್ತಿಗೆ ಆಯ್ಕೆ ಮಾಡಲು ಈ ಸರಕಾರಕ್ಕೆ ಒಬ್ಬ ರೈತನೂ ಸಿಗಲಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments