ಸೂಕ್ತ ದಾಖಲೆಗಳಿದ್ದರೆ ಬಿಡುಗಡೆಗೊಳಿಸಲಿ ಯೋಗೇಶ್ವರ್ ಗೆ ಡಿಕೆಶಿ ಸವಾಲು

ಪಾವಗಡ ಸೌರ ವಿದ್ಯುತ್ ಯೋಜನೆಯಡಿ ಅಕ್ರಮವಾಗಿ ಭೂಮಿ ಖರೀದಿಸಿದ್ದೇನೆ ಎಂಬ ಆರೋಪ ನನ್ನ ಮೇಲಿದೆ. ಇದೆಲ್ಲಾ ಸುಳ್ಳು. ಈ ಬಗ್ಗೆ ದಾಖಲೆಗಳಿದ್ದರೆ ನೀಡಲಿ ಎಲ್ಲಾ ಆಸ್ತಿಯನ್ನು ಅವರ ಹೆಸರಿಗೆ ಬರೆದುಕೊಡುತ್ತೇನೆ' ಎಂದು ಹೇಳಿದ್ದಾರೆ.
'ನನ್ನ ವಿರುದ್ದ ಅಕ್ರಮಗಳ ಆರೋಪ ಮಾಡಿರುವ ಶಾಸಕ ಸಿ.ಪಿ ಯೋಗೇಶ್ವರ್ ಅದಕ್ಕೆ ಸೂಕ್ತವಾದ ದಾಖಲೆಗಳಿದ್ದರೆ ಅದನ್ನು ಬಹಿರಂಗಪಡಿಸಲಿ' ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.ಇನ್ನೂ ಬೆಂಗಳೂರಿನ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ರಾಷ್ಟ್ರಧ್ವಜದ ಜೊತೆಗೆ ನಾಡಧ್ವಜ ಹಾರಿಸಿದ್ದರಲ್ಲಿ ತಪ್ಪೇನು ಇಲ್ಲ ಎಂದಿದ್ದಾರೆ.
Comments