ನೂತನ ಪಕ್ಷದ ಅಧಿಕೃತ ಹೆಸರನ್ನು ಘೋಷಿಸಿದ ಉಪೇಂದ್ರ
ದುಡ್ಡಿಲ್ಲದೆ ರಾಜಕೀಯವನ್ನು ನಡೆಸುವುದು ಹೇಗೆ ಎಂಬುದನ್ನು ತಿಳಿಸಲಿದ್ದಾರಾ ಉಪ್ಪಿ. ರಿಯಲ್ ಸ್ಟಾರ್ ಉಪೇಂದ್ರ ಅವರು ಇತ್ತೀಚೆಗೆ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದರಾದರೂ ಇಂದು ತಮ್ಮ ನೂತನ ಪಕ್ಷದ ಅಧಿಕೃತ ಹೆಸರನ್ನು ಘೋಷಿಸಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ನಟ ಉಪೇಂದ್ರ ಅವರು ತಮ್ಮ ನೂತನ ಪಕ್ಷಕ್ಕೆ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಎಂದು ಹೆಸರಿಟ್ಟಿದ್ದಾರೆ. ಪಕ್ಷದ ಗುರುತಿಗಾಗಲಿ ಆಟೋ, ಸೈಕಲ್ , ಹಾಗು ಚಪ್ಪಲಿ ಚಿಹ್ನೆಗೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಆಟೋ ಚಿಹ್ನೆಗೆ ಮೊದಲ ಆದ್ಯತೆ ನೀಡಿದ್ದಾರೆ. ಕುಟುಂಬ ಸಮೇತ ಖಾಕಿ ತೊಟ್ಟು ಉಪೇಂದ್ರ ಆಗಮಿಸಿದ್ದರು, ಎಲ್ಲದರಲ್ಲೂ ಡಿಫರೆಂಟ್ ಚಿಂತನೆ ಮಾಡುವ ಉಪ್ಪಿ ತಮ್ಮ ಪಕ್ಷದ ಹೆಸರು ಘೋಷಣೆಯನ್ನು ವಿಭಿನ್ನವಾಗಿ ಮಾಡಿದ್ದಾರೆ. ವೇದಿಕೆ ಮೇಲೆ ಪತ್ರಕರ್ತರನ್ನು ಕೂರಿಸಿ, ವೇದಿಕೆ ಮುಂಭಾಗ ತಮ್ಮ ಕುಟುಂಬದವರ ಜೊತೆ ಆಸೀನರಾಗಿದ್ದರು.
ಕಲಾವಿದ ವಿಲಾಸ್ ನಾಯಕ್ ಕೆಪಿಜಿಪಿ ಪ್ರತಿಕೃತಿ ರಚಿಸಿದರು. ಪ್ರಜಾಕೀಯ ಆರಂಭಿಸಿದಾಗಿನಿಂದ ಜನರು ಉತ್ತಮವಾಗಿ ನನ್ನನ್ನು ಬೆಂಬಲಿಸಿದ್ದಾರೆ. ರಾಜಕೀಯ ಎಂಬು ಕಾನ್ಸೆಪ್ಟ್ ಬದಲಾಯಿಸುವುದು ನಮ್ಮ ಉದ್ದೇಶ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆ ಅಗತ್ಯವಿದೆ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಪಕ್ಷ ಘೋಷಣೆ ನಂತರ ಉಪೇಂದ್ರ ಹೇಳಿದ್ದಾರೆ. ಇನ್ನೂ ಕಾರ್ಯಕ್ರಮಕ್ಕೆ ಉಪೇಂದ್ರ, ಸಂಬಂಧಿಗಳು, ಸ್ನೇಹಿತರು ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Comments