ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣಗೆ ಸಡ್ಡು ಹೊಡೆಯಲು ಎ.ಮಂಜು ರೆಡೀ 

31 Oct 2017 11:22 AM |
7724 Report

ತಾಲೂಕಿನ ಬಿಡದಿಯ ಬಿಜಿಎಸ್‌ ವೃತ್ತದಿಂದ ಜೆಡಿಎಸ್‌ ಮುಖಂಡರೊಂದಿಗೆ ಎ.ಮಂಜು ನಲ್ಲಿಗುಡ್ಡೆ ಕರೆಗೆ ಹೆಜ್ಜೆ ಹಾಕಿದರು. ಈ ವೇಳೆ ನೂರಾರು ಸಂಖ್ಯೆಯಲಿ ಜೆಡಿಎಸ್‌ ಕಾರ್ಯಕರ್ತರು, ಬೆಂಬಲಿಗರು ಭಾಗವಹಿಸಿದ್ದರು. ಈ ವೇಳೆ  ಎ.ಮಂಜು, ತಾವು ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ಮನೆಗೆ ಕಾಲಿಟ್ಟಾಕ್ಷಣ ತಾವು ಮಾನಸಿಕವಾಗಿ ಜೆಡಿಎಸ್‌ ಪಕ್ಷ ಸೇರಿದ್ದಾಗಿದೆ ಹೇಳಿದರು. 

 

ತಾಲೂಕಿನ ಬಿಡದಿಯ ನಲ್ಲಿಗುಡ್ಡೆ ಕೆರೆಗೆ ಜೆಡಿಎಸ್‌ ಆಯೋಜಿಸಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಆ ಪಕ್ಷದ ಮುಖಂಡರೊಂದಿಗೆ ಬಾಗಿನ ಅರ್ಪಿಸುವ ಮೂಲಕ ತಾವು ಜೆಡಿಎಸ್‌ ಪಕ್ಷವನ್ನು ಈಗಾಗಲೇ ಸೇರಿರುವ ಬಗ್ಗೆ ಜಿ.ಪಂ ಸದಸ್ಯ ಎ.ಮಂಜು ಸ್ಪಷ್ಟ ಮಾಹಿತಿ ರವಾನಿಸಿದರು.

ಕಾಂಗ್ರೆಸ್‌ ಮೋಸ!:ಮಾಗಡಿ ವಿಧಾನಸಭಾ ಕ್ಷೇತ್ರದ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಆಯ್ಕೆಯಾಗುತ್ತಿರಲಿಲ್ಲ. ತಾವು ಆ ಭಾಗದ ಕಾಂಗ್ರೆಸ್‌  ಪಕ್ಷದ ನಾಯಕತ್ವ ವಹಿಸಿ, ಸಂಘಟಿಸಿದ ನಂತರ ಅಲ್ಲಿನ ಚಿತ್ರಣ ಬದಲಾಗಿತ್ತು. ಆದರೆ ಕಾಂಗ್ರೆಸ್‌ ಪಕ್ಷ ತಮಗೆ ಮೋಸ ಮಾಡಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಮಂಜು ಬೇಸರ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್‌ ಪಕ್ಷದ ಮುಖಂಡರು ಪಕ್ಷದ ಸಂಘಟನೆಗೆ ತಮನ್ನು ಬಳಸಿಕೊಂಡರಷ್ಟೆ, ನಂಬಿದವರೇ ತಮಗೆ ಮೋಸ ಮಾಡಿದ್ದಾರೆ ಎಂದರು. 

ಜೆಡಿಎಸ್‌ ಪಕ್ಷದಲ್ಲಿ ವಿಶ್ವಾಸ ಉಳಿಸಿಕೊಳ್ಳುವೆ: ಜೆಡಿಎಸ್‌ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ಎಂದೂ ಚ್ಯುತಿ ಬರದಂತೆ ನಡೆದುಕೊಳ್ಳುವುದಾಗಿ, ಬೇರೆಯವರಂತೆ (ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ) ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡುವುದಿಲ್ಲ ಎಂದರು.  ತಮಗೆ ಜೆಡಿಎಸ್‌ ಮಾತೃಪಕ್ಷ. ತಮ್ಮ ತಂದೆಯವರು ಜನತಾ ಪಕ್ಷದಲ್ಲಿ ಇದ್ದವರು. ತಾವು ಬ್ಯಾಟಪ್ಪ ಅವರ ಮನೆ ಮಗ. ಪಕ್ಷದಲ್ಲಿ  ತಮಗೆ ಕೊಡುವ ಹೊಣೆಗಾರಿಕೆಯನ್ನು ನಿಭಾಯಿಸಿ ಸಾಮಾನ್ಯ ಸೇವಕನಾಗಿರುತ್ತೇನೆ ಎಂದು ಹೇಳಿದರು. 

 

Edited By

Suresh M

Reported By

jds admin

Comments