ಅನಿತಾ ಕುಮಾರಸ್ವಾಮಿ ಬೆನ್ನಿಗೆ ನಿಂತ ಭವಾನಿ ರೇವಣ್ಣ
ಚನ್ನಪಟ್ಟಣ ಕ್ಷೇತ್ರದಲ್ಲಿ ಅನಿತಾ ಕುಮಾರ ಸ್ವಾಮಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಎಚ್ ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಅನಿತಾ ನನ್ನ ಕೋ ಸಿಸ್ಟೆರ್ ,ಬೇಕಾದ್ರೆ ಚುನಾವಣೆಯಲ್ಲಿ ಅವರ ಪರವೂ ಪ್ರಚಾರ ಮಾಡ್ತೀನಿ ಅಂತ ಭವಾನಿ ರೇವಣ್ಣ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಕ್ಷೇತ್ರದ ಆಯ್ಕೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಎಚ್ ಡಿ ದೇವೇಗೌಡರು ಹಾಗು ದೇವರಿಗೆ ಬಿಟ್ಟಿದ್ದು ನಾನು ಪಕ್ಷದ ಕಾರ್ಯಕರ್ತೆಯಾಗಿ ಕಾರ್ಯಕ್ರಮಕ್ಕೆ ಭಾಗವಹಿಸುತ್ತಾ ಇದೀನಿ. ಅಲ್ಲದೆ ಬೇಳೂರು ಸೇರಿದಂತೆ ಹಲವು ಕಡೆ ಹೀಗಾಗಲೇ ಪಕ್ಷ ಸಂಘಟನೆಯಲ್ಲಿ ಭಾಗಿಯಾಗಿದ್ದೇನೆ. ಆದರೆ ನನ್ನ ಚುನಾವಣೆ ಸ್ಪರ್ಧೆ ಸದ್ಯಕ್ಕಿಲ್ಲ ಅಂತ ಭವಾನಿ ರೇವಣ್ಣ ಸ್ಪಷ್ಟ ಪಡಿಸಿದ್ದಾರೆ. ನನಗೆ ಲೋಕಸಭೆ ಚುನಾವಣೆಗಿಂತ ವಿಧಾನಸಭಾ ಚುನಾವಣೆ ಮುಖ್ಯ . ಲೋಕಸಭೆ ಚುನಾವಣೆಗೆ ಹಾಸನದಿಂದ ಸ್ಪರ್ಧೆ ಮಾಡೋ ವಿಚಾರ ಇದ್ಯಾ ಎಂಬ ಪ್ರಶ್ನೆಗೆ ಆ ರೀತಿಯ ಉತ್ತರವನ್ನು ಕೊಟ್ಟರು. ನಿಮ್ಮ ಸ್ಪರ್ಧೆ ಎಲ್ಲಿಂದ ಆಗುತ್ತೆ ?, ನಿಮ್ಮ ಸ್ಪರ್ಧೆ ನಿಜಾನಾ ? ಅಥವಾ ಕಾರ್ಯಕರ್ತರ ಒತ್ತಡವಿದ್ಯಾ ? ಎಂಬ ಪ್ರಶ್ನೆಗೆ ಭವಾನಿ ರೇವಣ್ಣ ಹೇಳಿದ್ದು ಹೀಗೆ ನಮ್ಮ ಕುಟುಂಬದಲ್ಲಿ ಎಲ್ಲವನ್ನು ಕೂಡ ದೇವೇಗೌಡರೂ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾನು ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಬೇರೆ ಕ್ಷೇತ್ರಗಳಲ್ಲಿ ಓಡಾಡಿ ಪಕ್ಷ ಸಂಘಟನೆ ಮಾಡ್ತೀನಿ ಎಂದು ಹೇಳಿದರು.
Comments