ಜೆಡಿಎಸ್ ನಿಂದ ಚುನಾವಣಾ ಯಜ್ಞ ..!

30 Oct 2017 1:02 PM |
2346 Report

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆ ಹೋಮ ಹವನ ಜೋರಾಗಿದೆ. ಬೆಂಗಳೂರಿನಲ್ಲಿರುವ ಜೆಡಿಎಸ್ ಮುಖ್ಯ ಕಚೇರಿಯಲ್ಲಿ ಯಜ್ಞ ನಡೆಸಲಾಗುತ್ತಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು , ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ , ಎಚ್ ಡಿ ರೇವಣ್ಣ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ತೀಕ ಮಾಸದ ಎರಡನೇ ಸೋಮವಾರದಂದು ಹೋಮ ಹವನ ನಡೆಯುತ್ತಿದೆ. ಜೆಡಿಎಸ್ ನ ಎಲ್ಲ ಕಾರ್ಯಕರ್ತರು ಈ ಯಜ್ಞದಲ್ಲಿ ಭಾಗಿಯಾಗಿದ್ದಾರೆ. ದೇವೇಗೌಡರ ಕುಟುಂಬದ ಸದಸ್ಯರು ದೇವರಲ್ಲಿ ನಂಬಿಕೆಯಿಟ್ಟಂತವರು. ಹೆಚ್ಚಾಗಿ ಪೂಜಾ ಹವನಗಳಿಗೆ ಮೊರೆ ಹೋಗುವಂತವರು. ಈ ಹಿಂದೆ ಪಕ್ಷದ ಕಚೇರಿ ಉದ್ಘಾಟನೆಯಾಗಿತ್ತು. ಆದರೆ ಚುನಾವಣೆಗೂ ಮುನ್ನ ಗೃಹ ಪ್ರವೇಶದಲ್ಲಿ ನಡೆಸುವಂತೆ ಗೋವಿನ ಪೂಜೆ , ಗಣಪತಿಯ ಹೋಮ , ಲಕ್ಷ್ಮಿ ಹೋಮ , ನರಸಿಂಹಸ್ವಾಮಿ ಹೋಮ ಈ ರೀತಿಯ ಎಲ್ಲ ಹೋಮಗಳನ್ನು ಮಾಡಲಾಗಿದೆ. ನೆನ್ನೆ ಸಂಜೆಯಿಂದ ಹೋಮ ಹವನಗಳು ಶುರುವಾಗಿದ್ದು ಇದೀಗ ಮುಗಿಯುತ್ತ ಬಂದಿದೆ.

Edited By

Suresh M

Reported By

jds admin

Comments