ನೇರ ಸಂದರ್ಶನದಲ್ಲಿ ಜನಸಾಮಾನ್ಯರಿಗೆ ಎಚ್ ಡಿಕೆ ಹೇಳಿದ್ದೇನು
ರಾಜಕೀಯವಾಗಿ ಈ ಸಲದ ಚುನಾವಣೆ ತ್ರಿಕೋನ ಸ್ಪರ್ಧೆ ಇಲ್ಲಿ ವಾಸ್ತವವಾಗಿ ಇರತಕ್ಕಂತದ್ದು ಸೋಲು , ಗೆಲುವಿನ ಲೆಕ್ಕಾಚಾರದಲ್ಲಿ ಅನೇಕ ಅಂಶಗಳಿವೆ. ಬಿಜಿಪಿ ತಂಡ , ಕಾಂಗ್ರೆಸ್ ತಂಡವೆಂಬ ದೊಡ್ಡ ತಂಡವಿದೆ. ಚುನಾವಣೆ , ಕುಸ್ತಿ ಅಥವಾ ಯುದ್ಧವನ್ನು ತೆಗೆದುಕೊಂಡಾಗ ಮೊದಲ ಕುಸ್ತಿಪಟು ಕುಮಾರಸ್ವಾಮಿ ಯವರೇ ಆಗಿರುತ್ತಾರೆ , ಅದರ ಜೊತೆಗೆ ಈ ತಾಲೂಕು ಕ್ಷೇತ್ರಗಳಲ್ಲಿ ಕುಸ್ತಿ ಪಟುಗಳನ್ನು ರೆಡಿ ಮಾಡಬೇಕು....
ನೀವು ಇಷ್ಟು ದಿನಗಳ ಕಾಲ ಜೆಡಿಎಸ್ ಮೊದಲ ಪಕ್ಷ ಆಗುತ್ತೆ , ಅಭ್ಯರ್ಥಿಗಳ ಹೆಸರನ್ನು ಸೂಚಿಸುತ್ತೇವೆ ಎಂದು ಹೇಳಿದಿರಿ ಇಲ್ಲಿಯವರೆಗೂ ಯಾವ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ಮಾಡಿಲ್ಲ ಎಂಬ ಪ್ರಶ್ನೆಗೆ ಎಚ್ ಡಿಕೆ ಉತ್ತರಿಸಿದ್ದು ಹೀಗೆ ಸುಮಾರು 135 ರಿಂದ 140 ಕ್ಷೇತ್ರಗಳಲ್ಲಿ ಈಗಾಗಲೇ ಅಭ್ಯರ್ಥಿಗಳು ಯಾರು ಎಂಬುದನ್ನು ಗುರುತಿಸಲಾಗಿದೆ. ಅವರಿಗೆ ಕೆಲಸದ ಬಗ್ಗೆ ಸೂಚನೆಯನ್ನು ನೀಡಲಾಗಿದೆ. ಅಧಿಕೃತವಾಗಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡದಿದ್ದರು, ಈಗಾಗಲೇ ತೀರ್ಮಾನ ಮಾಡಲಾಗಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಲವಾರು ಭಾರಿ ಮಾಡಬೇಕೆಂದು ನಿರ್ಧಾರ ಮಾಡಿದ್ರು ವಯಕ್ತಿಕವಾಗಿ ದೇವೇಗೌಡರ ಸಲಹೆಯ ಮೇರೆಗೆ ಸ್ವಲ್ಪ ಮುಂದೂಡಲಾಗಿದ್ದು ನಿಜ. ಅಲ್ಲದೆ ನನ್ನ ಆರೋಗ್ಯದ ತೊಂದರೆಯಿಂದ ಮತ್ತೆ ಅದು ಮುಂದಕ್ಕೆ ಹೊಯ್ತು, ಸದ್ಯದಲ್ಲೇ 140 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಬಹುಶ ಬೇರೆ ಪಕ್ಶದವರಿಗಿಂತ ಮುಂಚಿತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಅಭ್ಯರ್ಥಿಗಳ ಪಟ್ಟಿ ನವೆಂಬರ್ ಅಂತಿಮದೊಳಗೆ ತಿಳಿಸುತ್ತೆವೆ ಎಂದು ಕುಮಾರಸ್ವಾಮಿಯವರು ಸ್ಪಷ್ಟ ಪಡಿಸಿದರು.
ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರ ತೊಂದರೆಗಳನ್ನು ಮುಂದಿಟ್ಟುಕೊಂಡು ಸರಿಪಡಿಸುವ ಬಗ್ಗೆ ಯೋಚಿಸುತ್ತೇವೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಇಂದಿರಾ ಕ್ಯಾಂಟೀನ್ ಮುಂದುವರೆಸುತ್ತೀರಾ ? ಎಂಬ ಪ್ರಶ್ನೆಗೆ ಎಚ್ ಡಿಕೆ ಉತ್ತರಿಸಿದ್ದು ಹೀಗೆ , ನನ್ನ ಕಾರ್ಯಕ್ರಮದಲ್ಲಿ ಅದು ಇದೆ 2013 ರಲ್ಲಿ ಈ ಬಗ್ಗೆ ಹೇಳಿದ್ದೆ ಅದಷ್ಟೆಅಲ್ಲ ನಾನು ಈಗಾಗಲೇ ಹಿರಿಯ ನಾಗರೀಕ ತಂದೆ ,ತಾಯಿಯರಿಗೆ ಅವರು ಬದುಕಿರುವ ವರೆಗೆ 5000 ರೂ ಗೌರವಧನ ಕೊಡತಕ್ಕಂತ ಕಾರ್ಯಕ್ರಮ , ಗರ್ಭಿಣಿ ತಾಯಂದಿರಿಗೆ ಅಂಗನವಾಡಿಯಲ್ಲಿ ಊಟದ ವ್ಯವಸ್ಥೆ ಮಾಡುತ್ತೇನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇವತ್ತಿನ ಅಪೌಷ್ಠಿಕಾಂಶದ ಕೊರತೆಯಿಂದ ಇವತ್ತು ಮಾತೃಪೂರ್ಣ ಎಂದು ಮಾಡಿಕೊಂಡಿದ್ದಾರೆ. ಆದರೆ ಹೆಣ್ಣು ಮಕ್ಕಳು ಅಲ್ಲಿಹೋಗಲು ತಯಾರಿಲ್ಲ . ನನ್ನ ಕಾರ್ಯಕ್ರಮ 6 ನೇ ತಿಂಗಳಿಂದ ಪ್ರತಿತಿಂಗಳು 6000 ರೂ ತಾಯಿ ಮತ್ತು ಮಗುವಿನ ಆರೋಗ್ಯ ಪೌಷ್ಟಿಕಾಂಶದ ಕೊರತೆ ನೀಗಿಸಲು ಒಂದು ದೊಡ್ಡ ಕಾರ್ಯಕ್ರಮ ಆಯೋಜಿಸಿದ್ದೇನೆ. ಅಂಗವಿಕಲರು ವಿಧವೆಯರಿಗೆ 2000 ರೂ ನೀಡಬೇಕೆಂದಿದ್ದೇನೆ. 5 ಲಕ್ಷ ಕುಟುಂಬಗಳಿಗೆ ಮರ ನೆಡುವ ಕಾರ್ಯಕ್ರಮದಡಿಯಲ್ಲಿ ಗ್ರಾಮಗಳಲ್ಲಿನ ಜನರಿಗೆ 5 ರಿಂದ 6 ಸಾವಿರ ರೂ ಸಂಬಳ ನೀಡಿ 20 ವರ್ಷಗಳ ಕಾಲ ಕೆಲಸ ಮಾಡಬೇಕು ಎಂದಿದ್ದೇನೆ. 5 ಲಕ್ಷಕ್ಕೆ ಯಾವ ರೀತಿ ಉದ್ಯೋಗ ಸೃಷ್ಟಿ ಮಾಡಬೇಕು ಎಂಬುದರ ಬಗ್ಗೆ ನೀಲಿ ನಕ್ಷೆ ತಯಾರಾಗಿದೆ. ಅಲ್ಲದೆ ರೈತರಿಗೆ ಸಾಲ ಮನ್ನಾ ಮಾಡುವುದರ ಬಗ್ಗೆಯೂ ಚರ್ಚೆ ನಡೆಸಿದ್ದೇನೆ. ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ. ಅದರ ಜೊತೆಗೆ ಸಾಲ ಮತ್ತೆ ಮಾಡದೇ ಇರುವ ರೀತಿಯಲ್ಲಿ ಕಾರ್ಯಕ್ರಮ ಮಾಡಲು ಸಿದ್ಧಗೊಳಿಸಿದ್ದೇವೆ ಎಂದು ಎಚ್ ಡಿಕೆ ತಮ್ಮ ಪಕ್ಷದ ಮುಂದಿನ ನಿಲುವನ್ನು ಹೇಳಿದ್ದಾರೆ.
Comments