ಚುನಾವಣೆಗೆ ಕಾರ್ಯಕರ್ತ ರನ್ನು ಸಜ್ಜುಗೊಳಿಸಲು ಎಚ್ ಡಿಕೆ ಮಾಸ್ಟರ್ ಪ್ಲಾನ್

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುತ್ತಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಪಕ್ಷದ ವಿಚಾರಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಾರ್ಯಕರ್ತರಿಗೆ ನೇರವಾಗಿ ತಲುಪಿಸಲು ನಿರ್ಧರಿಸಿದ್ದಾರೆ.
ಈ ಉದ್ದೇಶದಿಂದ ಸಾಮಾಜಿಕ ಜಾಲ ತಾಣದಲ್ಲಿ ಈಗಾಗಲೇ ಹೊಸ ಖಾತೆ ತೆರೆದಿರುವ ಅವರು, ಪಕ್ಷದ ಕಾರ್ಯಕರ್ತರ ಹೆಸರು, ಮೊಬೈಲ್ ಸಂಖ್ಯೆ ಮತ್ತು ವಿಧಾನಸಭಾ ಕ್ಷೇತ್ರವನ್ನು ಇದಕ್ಕೆ ಸಂಬಂಧಿಸಿದ ಲಿಂಕ್‌ನಲ್ಲಿ ನಮೂದಿಸುವಂತೆ ಮನವಿ ಮಾಡಿದ್ದಾರೆ.ಮೊದಲ ದಿನ 50 ಸಾವಿರ ಹಾಗೂ ಎರಡನೇ ದಿನ 30 ಸಾವಿರಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಲಿಂಕ್ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದು, ಏಕಕಾಲದಲ್ಲಿ ಕನಿಷ್ಠ 15 ಲಕ್ಷ ಜನರಿಗೆ ಪಕ್ಷದ ಮಾಹಿತಿ ರವಾನಿಸಲು ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಜೆಡಿಎಸ್ ಪಕ್ಷದ ಮೂಲಗಳು ತಿಳಿಸಿವೆ.
Comments