ಪವರ್ ಮಿನಿಸ್ಟರ್ ಗೆ ಸೆಡ್ಡು ಹೊಡೆಯಲು ಸಿಪಿ ಯೋಗೇಶ್ವರ್ ಮಾಸ್ಟರ್ ಪ್ಲಾನ್
ರಾಮನಗರದಲ್ಲಿ ರಾಜಕೀಯ ಚಟುವಟಿಕೆ ರಂಗೇರಿದೆ ಚನ್ನಪಟ್ಟಣ ಶಾಸಕ ಸಿ ಪಿ ಯೋಗೇಶ್ವರ್ ಡಿ ಕೆ ಶಿವಕುಮಾರ್ ಗೆ ಸೆಡ್ಡು ಹೊಡೆಯಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ...
ಕನಕಪುರ ಕ್ಷೇತ್ರದಲ್ಲಿ ಡಿ ಕೆ ಶಿವಕುಮಾರ್ ವಿರುದ್ಧ ಸ್ಪರ್ಧಿಸಲು ನಂದಿನಿ ಗೌಡ ಸಿದ್ಧವಾಗಿದ್ದಾರೆ. ಕನಕಪುರ ತಾಲೂಕಿನ ಕಾಡಳಿ ನಿವಾಸಿಯಾಗಿರೋ ನಂದಿನಿ ಗೌಡ ಇತ್ತೀಚಿಗೆ ಜೆಡಿಎಸ್ ತೊರೆದಿದ್ದರು.ಜೆಡಿಎಸ್ ಪಕ್ಷದಲ್ಲಿ ರಾಜ್ಯ ಮಹಿಳಾ ಪ್ರಧಾನಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.ಎಚ್ ಡಿಕೆ ಹಾಗು ಎಚ್ ಡಿಡಿ ತನ್ನನ್ನು ನಿರ್ಲಕ್ಷಿಸಿದ್ದರೆಂದು ಆರೋಪಿಸಿ ಪಕ್ಷ ತೊರೆದಿರೋ ನಂದಿನಿಗೌಡ ಸಿಪಿ ಯೋಗೇಶ್ವರ್ ನೇತೃತ್ವದಲ್ಲಿ ನವೆಂಬರ್ 2 ರಂದು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ.
Comments