ನರೇಂದ್ರ ಮೋದಿರವರ ಒಂದು ದೂರವಾಣಿ ಕರೆಯಿಂದ ಸಾವಿರಾರು ಜನರ ಪ್ರಾಣ ಉಳಿದಿದು ಹೇಗೆ ಗೊತ್ತ ???

ಸಚಿವೆ ಸುಷ್ಮಾ ಸ್ವರಾಜ್ ಅವರು ಚೀನಾದೊಂದಿಗಿನ ‘ಧೋಕ್ಲಂ’ ಬಿಕ್ಕಟ್ಟಿನ ಬಗ್ಗೆ ಸಂಸತ್ತಿನಲ್ಲಿ ಮಾತನಾಡುತ್ತಾ, ಯೆಮೆನ್’ನಿಂದ ಸಾವಿರಾರು ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಪ್ರಧಾನಿ ಮೋದಿ ಯಾವ ರೀತಿ ಅತಿದೊಡ್ಡ ಪಾತ್ರ ವಹಿಸಿದ್ದಾರೆಂದು ಬಹಿರಂಗಪಡಿಸಿದ್ದಾರೆ….
ಯೆಮೆನ್’ನಿಂದ ಸಾವಿರಾರು ನಾಗರಿಕರನ್ನು ಸ್ಥಳಾಂತರಿಸಲು ಸಾಧ್ಯವಾಯಿತು. ಏಕೆಂದರೆ ಸ್ವಲ್ಪ ಸಮಯದವರೆಗೆ ಯೆಮೆನ್ ದೇಶಕ್ಕೆ ಗುಂಡು ಹಾರಿಸುವುದನ್ನು ನಿಲ್ಲಿಸಲು ಸೌದಿ ಕಿಂಗ್ ಆದೇಶ ನೀಡಿದ್ದರು. “ಅದು ಸುಲಭವಾದ ಕೆಲಸವಾಗಿರಲಿಲ್ಲ” ಇದರಿಂದ ಒಟ್ಟು 48 ದೇಶಗಳ ಅಂದರೆ 4000 ಭಾರತೀಯರು, 2000 ವಿದೇಶಿಯರನ್ನು ಭಾರತ ಯೆಮೆನ್’ನಿಂದ ತಕ್ಷಣ ತೆರವುಗೊಸಿತು .
ಇದಕ್ಕಾಗಿ ಸೌದಿ ಅರೇಬಿಯಾ ದೊರೆ ಸಲ್ಮಾನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿದ್ದರು. ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಸಲ್ಮಾನ್ ತನ್ನ ಸೇನೆಗೆ ಯೆಮೆನ್ ದೇಶಕ್ಕೆ ಗುಂಡು ಹಾರಿಸುವುದನ್ನು ನಿಲ್ಲಿಸಲು ಆದೇಶ ನೀಡಿದರು. ಒಂದು ಕರೆಯಿಂದ ಸಾವಿರಾರು ಮುಗ್ಧ ಜನರ ಪ್ರಾಣ ರಕ್ಷಣೆಯಾಯಿತು .
Comments