ಲೈನ್ ಮ್ಯಾನ್ ಗಳಿಗೆ ಪವರ್ ಮ್ಯಾನ್ ಅವಾರ್ಡ್ : ಡಿಕೆಶಿ

ಸಚಿವ ಡಿ.ಕೆ.ಶಿವಕುಮಾರ್ ಲೈನ್ ಮ್ಯಾನ್ ಗಳಿಗೆ ಸಾಮಾಜಿಕ ಸ್ಥಾನಮಾನ ಹೆಚ್ಚಿಸಬೇಕಾಗಿದ್ದು, ಇಂಜಿನಿಯರ್ ಗಳು, ಲೈನ್ ಮ್ಯಾನ್ ಗಳು ಸೇರಿದಂತೆ ಇಂಧನ ಇಲಾಖೆಯ ಏಳು ಹುದ್ದೆಗಳ 174 ಮಂದಿಗೆ 2017 ಪವರ್ ಅವಾರ್ಡ್ ನ್ನು ಅಕ್ಟೋಬರ್ 28 ರಂದು ಸಂಜೆ ಐದೂವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದರು.
ಬ್ರಿಟಿಷರ ಕಾಲದಿಂದಲೂ ರಾಜ್ಯದ ವಿದ್ಯುತ್ ಇಲಾಖೆಯಲ್ಲಿ ಕೆಳ ಸ್ತರದಲ್ಲಿ ಕೆಲಸ ಮಾಡುತ್ತಿರುವ ಸುಮಾರು 45 ಸಾವಿರ ಲೈನ್ ಮ್ಯಾನ್ ಗಳ ಸ್ಥಾನಮಾನ ಹೆಚ್ಚಿಸುವ ಸಲುವಾಗಿ ಇನ್ಮುಂದೆ ಅವರನ್ನು ಪವರ್ ಮ್ಯಾನ್ ಗಳೆಂದು ಕರೆಯಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಲ್ಲಿದ್ದಲಿನ ತೀವ್ರ ಕೊರತೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿದ್ಯುತ್ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ. ರಾಜ್ಯಕ್ಕೆ ಅಗತ್ಯವಾದ ವಿದ್ಯುತ್ ತಯಾರಿಸಲು ಕೇವಲ ಅರ್ಧ ದಿನಕ್ಕೆ ಸಾಲುವಷ್ಟು ಕಲ್ಲಿದ್ದಲು ಮಾತ್ರ ಇದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಎರಡು ತಿಂಗಳ ಮಟ್ಟಿಗೆ ವಿದ್ಯುತ್ ಎಮರ್ಜೆನ್ಸಿಯನ್ನು ಹೇರಲಾಗಿದೆ.
ಕಲ್ಲಿದ್ದಲಿನ ಸಮಸ್ಯೆ ರಾಜ್ಯದ ಸಮಸ್ಯೆ ಮಾತ್ರವಲ್ಲ, ದೇಶದ ಎಲ್ಲ ರಾಜ್ಯಗಳ ಸಮಸ್ಯೆ. ನ್ಯಾಯಾಲಯದ ತೀರ್ಪಿನಿಂದ ಇಂತಹದೊಂದು ಸಮಸ್ಯೆ ಸೃಷ್ಟಿಯಾಗಿದೆ ಹೀಗಾಗಿ ಕೇಂದ್ರದ ಖಾಸಗಿ ಗುತ್ತಿಗೆದಾರರಿಂದಲಾದರೂ ಸರಿ, ಟೆಂಡರ್ನಂತಹ ಪ್ರಕ್ರಿಯೆಗಳಿಗೆ ಕೈ ಹಾಕದೆ ಕಲ್ಲಿದ್ದಲು ಪೂರೈಕೆಯಾಗುವಂತೆ ನೋಡಿಕೊಳ್ಳಿ. ಜನರಿಗೆ ವಿದ್ಯುತ್ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ಹೇಳಿದರು. ಗಂಗಾ ಕಲ್ಯಾಣ ಯೋಜನೆಯಡಿ ಶೋಷಿತ ಸಮುದಾಯಗಳ ಜನರಿಗಾಗಿ 72500 ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸರಬರಾಜನ್ನು ನೀಡಲಾಗಿದೆ. ಹಾಗೆಯೇ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆ ಅಡಿ 27 ಲಕ್ಷ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ನೀಡಿ ತಲಾ ನಲವತ್ತು ಯೂನಿಟ್ ವಿದ್ಯುತ್ ನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.
Comments