ಶ್ರೀಗಳ ಭೇಟಿ ನಂತರ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು ?

ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು, ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಮಂಗಳವಾರ ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಬೇಗ ಚೇತರಿಸಿಕೊಂಡು ಜನರ ಮಧ್ಯೆ ಬನ್ನಿ. ನಿಮ್ಮ ಮಾನವೀಯ ಗುಣ ಹಾಗೂ ಜನಪರ ಕಾಳಜಿ ಮೆಚ್ಚಿಕೊಂಡಿರುವ ಜನರು ನಿಮ್ಮನ್ನು ಎದುರು ನೋಡುತ್ತಿದ್ದಾರೆ ಎಂದು ಶ್ರೀಗಳು ಆಶೀರ್ವಾದ ಮಾಡಿದ್ದಾರೆ. ಸ್ವಾಮೀಜಿಗಳ ಭೇಟಿ ನನಗೆ ಸಂತೋಷ ತಂದಿದೆ. ಪೂರ್ಣ ಚೇತರಿಸಿಕೊಂಡಿರುವ ನಾನು ಕರ್ನಾಟಕ ರಾಜ್ಯೋತ್ಸವದ ಬಳಿಕ ಚುನಾವಣೆ ಸಿದ್ಧತೆಯಾಗಿ ರಾಜ್ಯ ಪ್ರವಾಸ ಆರಂಭಿಸುತ್ತಿದ್ದೇನೆ ಎಂದು ತಿಳಿಸಿದರು.
Comments