ಕುಮಾರಣ್ಣನ ಯಾವ ಮಾಸ್ಟರ್ಪ್ಲ್ಯಾನ್ ಹುರುಳಾಗಿದೆ ಶೋಭಕ್ಕಗೆ ಗೊತ್ತಾ !

ಇಂಧನ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ವರದಿ ನೀಡಲು ಸದನ ಸಮಿತಿ ರಚನೆಯಾಗಿದ್ದು, ಅದರ ವರದಿಯಲ್ಲಿ ಶೋಭಾ ಕರಂದ್ಲಾಜೆ….
ಇಂಧನ ಸಚಿವೆಯಾಗಿದ್ದ ಕಾಲದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಹೈಲೆಟ್ ಮಾಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಸದನ ಸಮಿತಿ ಸಭೆ ಸಂದರ್ಭದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸದನ ಸಮಿತಿಗೆ ಯಾವ ಕಾಲದಲ್ಲಿ ಎಷ್ಟು ಇಂಧನ ಮತ್ತು ಕಲ್ಲಿದ್ದಲು ಖರೀದಿ ಆಗಿದೆ ಎನ್ನುವುದರ ಕುರಿತು ನೀಡಿದ್ದ ಮಾಹಿತಿಯಲ್ಲಿ ಶೋಭಾ ಕರಂದ್ಲಾಜೆ ಸಚಿವರಾಗಿದ್ದಾಗ ಇಂಧನ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದು ದಾಖಲೆ ನೀಡಿದ್ದರು.
ಕುಮಾರಸ್ವಾಮಿ ನೀಡಿದ ದಾಖಲೆಯನ್ನೇ ಆಧಾರವಾಗಿಟ್ಟುಕೊಂಡು ಶೋಭಾ ಅವರನ್ನು ವರದಿಯಲ್ಲಿ ಸಿಕ್ಕಿಹಾಕಿಸುವ ಪ್ಲಾನ್ ಕಾಂಗ್ರೆಸ್ ಕಡೆಯಿಂದ ನಡೆಯುತ್ತಿದೆ ಎಂದು ತಿಳಿದುಬಂದಿದೆ.
Comments