ಬಿ ಎಸ್ ವೈ ಆರೋಪಕ್ಕೆ ಸಚಿವ ಡಿಕೆಶಿ ಸ್ಪಷ್ಟಿಕರಣ
"ಬಿಎಸ್ ವೈ ಇಂಥಾ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ ಎಂದು ಭಾವಿಸಿರಲಿಲ್ಲ": ದೆಹಲಿಯಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ. ಹಗರಣ ವನ್ನು ಸಿಬಿಐ ಗೆ ವಹಿಸುವಂತೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ. ಪತ್ರ ಬರೆಯಲಿ ಅದಕ್ಕೆ ನಮ್ಮ ಸ್ವಾಗತ ಇದೆ.
ಯಾವುದೇ ತನಿಖೆಗೂ ನಾವು ಸಿದ್ಧ. ಯಾವ ಪಬ್ಲಿಕ್ ಡಿಬೆಟ್ ಗೂ ನಾನು ಸಿದ್ಧನಿದ್ದೇನೆ. ಕೇಂದ್ರ ಸರ್ಕಾರದ ನೀತಿ ನಿಯಮಗಳಿಗೆ ಅನುಸಾರವಾಗಿಯೇ ಒಪ್ಪಂದಗಳು ನಡೆದಿದ್ದವು. ಸುಪ್ರೀಂ ತೀರ್ಪಿನಿಂದಾಗಿ ನಮ್ಮ ಕೋಲ್ ಬ್ಲಾಕ್ ಕೂಡ ರದ್ದಾಯ್ತು. ನಮ್ಮ ಎಲ್ಲಾ ಸಂಸತ್ ಸದಸ್ಯರು ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಿ ಕೋಲ್ ಬ್ಲಾಕ್ ಹಂಚಿಕೆ ಗೆ ಕೋರಿಕೊಂಡಿದ್ದೆವು. ಪ್ರತಿ ವರ್ಷ ನಾವು ಜಾಸ್ತಿ ಹಣ ನೀಡಿ ಕೇಂದ್ರ ಸರ್ಕಾರ ಕಂಪೆನಿಗಳಿಂದ ಕೋಲ್ ಖರೀದಿ ಮಾಡುತ್ತಿದ್ದೇವೆ. ಇದರಿಂದ ಕೋಟಿಗಟ್ಟಲೆ ದುಡ್ಡು ಸರ್ಕಾರಕ್ಕೆ ನಷ್ಟ ಆಗುತ್ತಿದೆ. ಆದರೆ ಹಂಚಿಕೆಗೆ ಅರ್ಹತೆ ಸಿಗಬೇಕೆಂಬ ಉದ್ದೇಶದಿಂದ ಕೆಇಸಿಎಂಎಲ್ ಹಣ ಪಾವತಿ ಮಾಡಿದ್ದೆವು. ಜನರನ್ನು ವಿನಾಕಾರಣ ದಾರಿ ತಪ್ಪಿಸುವ ಕೆಲ್ಸ ಮಾಡಬೇಡಿ. ನಮ್ಮ ರಾಜ್ಯದ ಹಿತ ಕಾಪಾಡಲು, ನಷ್ಟ ಭರಿಸಲು ಕಂಪನಿಗೆ ಹಣ ಪಾವತಿ ಮಾಡಿದ್ದೇವೆ...ಇದು ಕೇಂದ್ರಕ್ಕೂ ಗೊತ್ತಿದೆ. ಯಡಿಯೂರಪ್ಪನವರಂತಹ ನಾಯಕರಿಂದ ಇಂಥಾ ಮಾತುಗಳು ಬರಬಾರದಿತ್ತು.
Comments