ದೇವೇಗೌಡರನ್ನು ಹಾಡಿ ಹೊಗಳಿದ ಜಮೀರ್ ಅಹಮ್ಮದ್ !!
ದೇವೇಗೌಡರು ನನ್ನ ಪಾಲಿನ ದೇವರು ರಾಜಕೀಯ ಗುರು ಅಂತ ಕೂಡ ದೇವೇಗೌಡ ಬಗ್ಗೆ ಗುಣಗಾನ ಮಾಡಿದ್ದಾರೆ. ನನ್ನ ರಾಜಕೀಯ ಬೆಳವಣಿಗೆಗೆ ದೇವೇಗೌಡರೇ ಕಾರಣ ಎಂದು ಜಮೀರ್ ಹೇಳಿದರು. ರಾಜಕೀಯದ ಗುರು ಎಂದೆಲ್ಲಾ ದೇವೇಗೌಡರನ್ನು ಹಾಡಿ ಹೊಗಳಿದ್ದಾರೆ. ನಾನು ಎಂದಿಗೂ ಅವರಿಗೆ ಋಣಿಯಾಗಿರುತ್ತೇನೆ ಎಂದು ಜಮೀರ್ ದೇವೇಗೌಡರ ಬಗ್ಗೆ ಹೇಳಿದ್ದಾರೆ.
ಜೆಡಿಎಸ್ ಎಂಎಲ್ ಸಿ ಶರವಣ ವಿರುದ್ಧ ಹರಿಹಾಯ್ದ ಜಮೀರ್ ಅಹಮ್ಮದ್. ಜೆಡಿಎಸ್ ನಿಂದ ಬಂಡಾಯವಾದ ನಂತರದಿಂದಲೂ ಕೂಡ ಕುಮಾರಸ್ವಾಮಿಯಾಗಿರಬಹುದು, ರೇವಣ್ಣನವರಾಗಿರಬಹುದು ಹಾಗೆ ಹಲವಾರು ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದ ಬಂದಿರುವ ಜಮೀರ್ ಇದೀಗ ಶರವಣ ಒಬ್ಬ ಬಕೆಟ್ ರಾಜಕಾರಣಿ ಎಂದು ಜಮೀರ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಹಿಂದೆ ಶರವಣ ನವರು ಜಮೀರ್ ಬೇರೆ ಕ್ಷರೇತರದಲ್ಲಿ ಸ್ಪರ್ಧಿಸಲಿ ಎಂದಿದ್ದ ಶರವಣನವರಿಗೆ ಜಮೀರ್ ತಿರುಗೇಟು ನೀಡಿದ್ದಾರೆ . ನಾನು ಶರವಣನವರಿಗೆ ಸವಾಲು ಹಾಕಿಲ್ಲ. ಚಾಮರಾಜಪೇಟೆ ಕ್ಷೇತ್ರಕ್ಕೆ ನಾನು ಮನೆ ಮಗ ಇದ್ದಂತೆ. ನನ್ನ ಮನೆಯನ್ನು ಏಕೆ ಬಿಡಬೇಕು ಎಂದು ಮರು ಪ್ರಶ್ನೆಯನ್ನು ಹಾಕಿದ್ದಾರೆ. ಅಲ್ಲದೆ ಈ ಹಿಂದೆ ಪ್ರಜ್ವಲ್ ರೇವಣ್ಣನವರು ಬಕೆಟ್ ಎಂಬ ಪದ ಪ್ರಯೋಗ ಮಾಡಿದ್ದರು ಅದನ್ನು ಜಮೀರ್ ಶರವಣ ನವರಿಗೆ ಹೇಳಿದ್ದಾರೆ , ಶರವಣ ಒಬ್ಬ ಬಕೆಟ್ ರಾಜಕಾರಣಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Comments