2018ರಲ್ಲಿ ಹೆಚ್.ಡಿ.ಕೆ ಅವರಿಂದ ವಿಧಾನಸೌಧದ ಮೇಲೆ ಕನ್ನಡ ಧ್ವಜರೋಹಣ !!

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕೃತ ಕನ್ನಡ ಧ್ವಜ ವಿಷಯದ ಬಗ್ಗೆ ಒಂಬತ್ತು ಸದಸ್ಯರ ಸಮಿತಿ ರಚಿಸಿ ಮೂರು ತಿಂಗಳಿಗಿಂತ ಹೆಚ್ಚು ಸಮಯ ಆಗಿದೆ. ನವೆಂಬರ್ ೧ ರ ಒಳಗೆ ಅರಿಶಿನ-ಕುಂಕುಮ ಬಣ್ಣದ ಕನ್ನಡ ಧ್ವಜವನ್ನು ಅಧಿಕೃತವಾಗಿ ಘೋಷಿಸಿ ವಿಧಾನಸೌಧದ ಮೇಲೆ ಹಾರಿಸದಿದ್ದರೆ, ಸಾವಿರಾರು ಜನ ವಿಧಾನಸೌಧಕ್ಕೆ ನುಗ್ಗಿ ಜೀವದ ಹಂಗು ತೊರೆದು ಕನ್ನಡ ಧ್ವಜವನ್ನು ವಿಧಾನಸೌಧದ ಮೇಲೆ ಹಾರಿಸುತ್ತೇವೆ ಎಂದು ಜೆಡಿಎಸ್ ಬೆಂಗಳೂರು ನಗರ ಅಧ್ಯಕ್ಷ ಆರ್.ಪ್ರಕಾಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಧ್ವಜದ ವಿಷಯ ಕೆದಕಿ ನಾಟಕವಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಕನ್ನಡಿಗರನ್ನು ಮೂರ್ಖರನ್ನಾಗಿ ಮಾಡಲು ಮುಂದಾಗಿದೆ., ನವೆಂಬರ್ ೧ ರಂದು ಕನ್ನಡಪರ ಚಿಂತಕರು, ಕನ್ನಡಪರ ಸಂಘಟನೆಗಳು ಹಾಗು ಸಾವಿರಾರು ಕನ್ನಡಿಗರು ಪಕ್ಷಾತೀತವಾಗಿ ವಿಧಾನಸೌಧಕ್ಕೆ ನುಗ್ಗಿ ಕನ್ನಡ ಧ್ವಜ ಹಾರಿಸುತ್ತೇವೆ ಎಂದು ಗುಡುಗಿದರು.
2018ರ ನವೆಂಬರ್ ೧ ಕರ್ನಾಟಕ ರಾಜ್ಯೋತ್ಸವ ದಿನದಂದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಇರುವಾಗ ವಿಧಾನಸೌಧದ ಮೇಲೆ ನಾವು ಕನ್ನಡ ಧ್ವಜ ಹಾರಿಸಿ ತೋರಿಸುತ್ತೇವೆ.
Comments