ಕುಮಾರಣ್ಣ ನೇತೃತ್ವದ ಸರ್ಕಾರದಲ್ಲಿ ಆರ್ಥಿಕ ಪ್ರಗತಿಯ ದರ ಎಷ್ಟಿತ್ತು, ಈಗ ಎಷ್ಟಿದೆ ಗೊತ್ತಾ ?
ಆರ್ಥಿಕವಾಗಿ ನಮ್ಮ ಕರ್ನಾಟಕ ದಕ್ಷಿಣ ಭಾರತದಲ್ಲೇ ಮೊದಲನೇ ಸ್ಥಾನದಲ್ಲಿ ಇದ್ದರೂ ಕೂಡ, ದಕ್ಷಿಣ ಭಾರತದ ಪೈಕಿ, ನಮ್ಮ ರಾಜ್ಯಕ್ಕೆ ಕೊನೆಸ್ಥಾನವನ್ನು ದೊರಕಿಸಿಕೊಟ್ಟ ಸಿದ್ದರಾಮಯ್ಯನವರು. ಕರ್ನಾಟಕ ರಾಜ್ಯದಲ್ಲೇ ಮೊಟ್ಟಮೊದಲ ಭಾರಿಗೆ 1995-99 ರಲ್ಲಿ ಜನತಾದಳ ನೇತೃತ್ವದ ಸರ್ಕಾರ ರಾಜ್ಯದ ವಾರ್ಷಿಕ ಬೆಳವಣಿಗೆ ದರ 9.1% ರಷ್ಟನ್ನು ತಲುಪುವ ಮೂಲಕ , ಹಿಂದಿನ ಎಲ್ಲಾ ಕಾಂಗ್ರೇಸ್ ಸರ್ಕಾರಗಳ ದಾಖಲೆಗಳನ್ನು ಹಿಮ್ಮೆಟ್ಟಿಸಿತು...
ನಂತರ 2000-2004 ರ ಕಾಂಗ್ರೇಸ್ ಸರ್ಕಾರದ ಕಾಲದಲ್ಲಿ ಆ ವಾರ್ಷಿಕ ಬೆಳವಣಿಗೆ ದರ 4.5% ರಷ್ಟಕ್ಕೆ ಇಳಿದು, ಅಭಿವೃದ್ದಿಯಲ್ಲಿ ಕರ್ನಾಟಕ ಪಾತಾಳ ಮುಟ್ಟಿತು. ತದ ನಂತರ 2006-2008 ರಲ್ಲಿ ಜೆಡಿಎಸ್ ಅಧಿಕಾರ ಹಿಡಿದು, 4.5% ರಷ್ಟಿದ್ದ ಬೆಳವಣಿಗೆ ದರವನ್ನು 10.2% ರಷ್ಟಕ್ಕೆ ತರುವುದರ ಮೂಲಕ ಈ ಹಿಂದಿನ ಜನತಾದಳ ಸರ್ಕಾರ ಮಾಡಿದ್ದ ಸಾಧನೆಯನ್ನು ಮತ್ತೋಮ್ಮೆ ಜನತಾದಳ ಸರ್ಕಾರವೇ ಪುಡಿಗಟ್ಟುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ವ್ಯಕ್ತಿ ನಮ್ಮ ಹೆಚ್ ಡಿ ಕುಮಾರಸ್ವಾಮಿಯವರು. ದುರದೃಷ್ಟಕರ ಸಂಗತಿ, 2009-2013 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 10.2% ರಷ್ಟಿದ್ದ ಪ್ರಗತಿ ದರ ವನ್ನು 5.6% ರಷ್ಟಕ್ಕೆ ತರುವುದರ ಮೂಲಕ ಮತ್ತೋಮ್ಮೆ ಪಾತಾಳಕ್ಕಿಳಿಸಿದರು. ಪ್ರಸ್ತುತ ಕಾಂಗ್ರೇಸ್ ಸರ್ಕಾರ 2014 ರಿಂದ ಅಧಿಕಾರ ನಡೆಸುತ್ತಿದ್ದರೂ….ರಾಜ್ಯದ ಪ್ರಗತಿ ದರ ಕೇವಲ 7.8% ರಷ್ಟಕ್ಕೆ ತೃಪ್ತಿ ಪಟ್ಟಿಕೊಂಡಿದೆ…
ಇಲ್ಲಿ ಗಮನಿಸಬೇಕಾದ ವಿಷಯ ಇದು ಸಿಕ್ಕ ಕೇವಲ 20 ತಿಂಗಳಲ್ಲೇ ಕರ್ನಾಟಕದ ಇತಿಹಾಸದಲ್ಲೇ ಕುಮಾರಸ್ವಾಮಿಯವರ ನೇತೃತ್ವದ ಸರ್ಕಾರದಲ್ಲಿ ಅಭಿವೃದ್ದಿ ದರ 10.2% ರಷ್ಟನ್ನು ತಲುಪಿ, ಈ ಹಿಂದೆಯೂ ಹಾಗೂ ಅವರ ಸರ್ಕಾರ ಅಧಿಕಾರದಿಂದ ದೂರ ಉಳಿದು 11ವರ್ಷ ಕಳೆದರೂ ಅಭಿವೃದ್ದಿಯಲ್ಲಿ ಅವರನ್ನು ಹಿಂದಿಕ್ಕುವ ಇನ್ನೊಬ್ಬ ಗಂಡು ನಮ್ಮ ನಾಡಿನಲ್ಲಿ ಹುಟ್ಟಲಿಲ್ಲ ನಮ್ಮ ನಾಡನ್ನು ಆಳಿದ ರಾಷ್ಟ್ರೀಯ ಪಕ್ಷಗಳ ಕಾಲದಲ್ಲಿ ಪ್ರಗತಿದರ ಪಾತಾಳ ತಲುಪಿದೆ. ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯದ ಅಭಿವೃದ್ದಿ ದರ ಮುಗಿಲು ಮುಟ್ಟಿದೆ .
Comments