ಅಪ್ಪನ ಮಾತು ಕೇಳಿದ್ರೆ ಮಾತ್ರ ಎಚ್ ಡಿಕೆ ಸಿಎಂ ಆಗ್ತಾರೆ
ಹಾಸನಾಂಬೆ ಕ್ಷೇತ್ರದಿಂದ ನುಡಿದ ಫಲ ನಿಜವಾಗುತ್ತೆ ನೆನಪಿಟ್ಟುಕೊಳ್ಳಿ ಎಂದು ಹೇಳುವ ಮೂಲಕ ಬ್ರಹ್ಮಾoಡ ಗುರೂಜಿ ಮುಂದಿನ ಸಿಎಂ ಬಗ್ಗೆ ಭವಿಷ್ಯ ನುಡಿದರು. ಈ ಸಲ ಬರುವ ಸರ್ಕಾರ ಬೆರಕೆ ಸಂಸಾರ . ದೇವೇಗೌಡರ ಮಾತನ್ನು ಕೇಳಿದ್ರೆ ಗ್ಯಾರಂಟಿ ಕುಮಾರಸ್ವಾಮಿಯವರು ಒಂದು ವ್ಯೆವಸ್ಥಿತವಾದ ಮುಖ್ಯಮಂತ್ರಿ ಸ್ಥಾನಕ್ಕೆ ಬರುವುದಲ್ಲದೆ ,ಕಿಂಗ್ ಮೇಕರ್ ಆಗುವ ಅವಕಾಶಗಳು ಇವೆ
ಬೆರಕೆ ಸಂಸಾರ ಅಂದ್ರೆ ಸಣ್ಣ ಸಣ್ಣವರು ಕೂಡ ಇವತ್ತಿನ ದಿವಸ ಎಲ್ಲರು ರಾಜ್ಯವನ್ನು ಆಳಲಿಕ್ಕೆ, ಯಾರ್ಯಾರೋ ಗೆಲ್ಲಬಹುದು ಹೇಳಕ್ಕಾಗಲ್ಲ. ಆದ್ದರಿಂದ ಧರ್ಮವನ್ನು ಪರಿಪಾಲನೆ ಮಾಡುವ ಯಾವುದೇ ರಾಜಕಾರಣಿ ನಿಜವಾದ ತಮ್ಮ ಕ್ಷೇತ್ರಗಳನ್ನೂ ಇನ್ನು ಮೇಲಾದರೂ ಸಕಾರಿಯವಾಗಿ ಕಾರ್ಯ ನಿರ್ವಹಿಸಬೇಕು. ಕುಮಾರಸ್ವಾಮಿಯವರು ಕಿಂಗ್ ಮೇಕರ್ ಆಗೋದು ಗ್ಯಾರಂಟಿ , ಆದ್ರೆ ಆರೋಗ್ಯ ಚನ್ನಾಗಿ ಇದ್ದಾರೆ ಮಾತ್ರ. ಅಲ್ಲದೆ ದೇವೇಗೌಡರ ಮಾತನ್ನು ಆಲಿಸಿದರೆ ,ಹಳೆಯ ತಪ್ಪುಗಳನ್ನು ಮೆಲುಕು ಹಾಕದೆ , ಮಾಡಿರೋ ತಪ್ಪನ್ನು ತಿದ್ದುಕೊಂಡು ಕಾರ್ಯ ನಿರ್ವಹಿಸಬೇಕು. ಉತ್ತರ ಕರ್ನಾಕದಲ್ಲಿ ಇವತ್ತು ಕಾಂಗ್ರೆಸ್ , ಬಿಜೆಪಿಗಿಂತಲೂ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಇದ್ರೂ ಭಹಳ ದಯಾಳು ಅಂತ ಅವರ ಮೇಲೆ ಬಹಳ ಒಲವು ಇದೆ. ಯಾಕಂದ್ರೆ ಅಲ್ಲಿರುವ ಸಕ್ಕರೆ ಕಾರ್ಖಾನೆ , ರೈಸ್ ಮಿಲ್ ಮಾಲೀಕರು ಜನಗಳ ಮೇಲೆ ಬಹಳ ದೌರ್ಜನ್ಯ ಮಾಡುತ್ತಿದ್ದಾರೆ ಇದರಿಂದ ಅಲ್ಲಿನ ಜನರು ಕುಮಾರಸ್ವಾಮಿಯವರ ಮೇಲೆ ಸಾಕಷ್ಟ್ಟು ಅಪೇಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಎಂದು ಹಾಸನದಲ್ಲಿ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಭವಿಷ್ಯ ನುಡಿದಿದ್ದಾರೆ.
Comments