ಜಮೀರ್ ಹೇಳಿಕೆಗೆ ತಿರುಗೇಟು ಕೊಟ್ಟ ಎಚ್ ಡಿಕೆ
ಮಾಜಿ ಪ್ರಧಾನಿ ದೇವೇಗೌಡರ ಸಾವಿನ ಬಗ್ಗೆ ಶಾಸಕ ಜಮೀರ್ ಹೇಳಿಕೆಗೆ ಸಂಬಂಧಪಟ್ಟಂತೆ ಮಾಜಿ ಸಿ.ಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು ದೇವೇಗೌಡರ ಮಗ ನಾನಿನ್ನೂ ಬದುಕಿದ್ದೇನೆ.
ಯಾವುದೇ ಸಂದರ್ಭದಲ್ಲೂ ನಾನಾಗಲೀ ರೇವಣ್ಣ ಅವರಾಗಲೀ ಯಾವುದೇ ರಾಷ್ಟ್ರೀಯ ಪಕ್ಷದ ಬಾಗಿಲು ತಟ್ಟಲ್ಲ, ಅಂತಹ ಪರಿಸ್ಥಿತಿ ಬಂದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇವೆ ಅಂತಾ ಜಮೀರ್ ಅವರಿಗೆ ಟಾಂಗ್ ನೀಡಿದ್ದಾರೆ. ಇದೇ ವೇಳೆ ಅವರು ಸ್ವಾಭಿಮಾನದಿಂದ ಪಕ್ಷ ಕಟ್ಟಲು ನಾವಿಬ್ಬರು ಕಂಕಣ ಬದ್ಧರಾಗಿದ್ದು, ಮುಂದಿನ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ರೇವಣ್ಣ ಮತ್ತು ನಾನು ಮಾತ್ರ ಸ್ಪರ್ಧಿಸುತ್ತೇವೆ. ಪ್ರಜ್ವಲ್ ರೇವಣ್ಣ ,ನಿಖಿಲ್ ಅವರು ಚುನಾವಣಾ ಪ್ರಚಾರದಲ್ಲಿ ಮಾತ್ರ ಭಾಗವಹಿಸುತ್ತಾರೆ ಎಂದು ಅವರು ಇದೇ ವೇಳ ಸ್ಪಷ್ಟಪಡಿಸಿದರು.
Comments