ಕುಮಾರಣ್ಣ ರಾಜ್ಯ ಪ್ರವಾಸಕ್ಕೆ ತೆರಳು ಹೈಟೆಕ್ ಬಸ್ ಸಿದ್ಧ, ಏನೆಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ ಗೊತ್ತಾ ??

ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ 2018ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ….
ನವೆಂಬರ್ 1 ರಿಂದ ಅವರು ರಾಜ್ಯಪ್ರವಾಸ ಆರಂಭಿಸಲಿದ್ದು, ಅದಕ್ಕಾಗಿ ವಿಶೇಷ ಹೈಟೆಕ್ ಬಸ್ ಬಳಕೆ ಮಾಡಲಿದ್ದಾರೆ. ಕುಮಾರಸ್ವಾಮಿ ಅವರು ನವೆಂಬರ್ 1 ರಿಂದ ರಾಜ್ಯ ಪ್ರವಾಸ ಪ್ರಾರಂಭಿಸಲಿದ್ದು, ಅದಕ್ಕಾಗಿ ಹೈಟೆಕ್ ಬಸ್ ಸಿದ್ಧಪಡಿಸಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕಾಗಿ ಹೈಟೆಕ್ ಬಸ್ ಬಳಕೆಗೆ ಎಚ್ಡಿಕೆ ಮುಂದಾಗಿದ್ದಾರೆ.
ಈ ಬಸ್ ಮಿನಿ ಮನೆಯಂತೆಯೇ ಇದ್ದು, ಹೈಡ್ರಾಲಿಕ್ ಬಳಸಿ ಲಿಫ್ಟ್ ಮೂಲಕ ಭಾಷಣ ಮಾಡಲು ಈ ಬಸ್ನಲ್ಲಿ ವ್ಯವಸ್ಥೆ ಇದೆ. ಜತೆಗೆ ಇದರಲ್ಲಿ ಒಂದು ಕೊಠಡಿಯಿದ್ದು, ಪ್ರತ್ಯೇಕ ಶೌಚಗೃಹವಿದೆ. ಬಸ್ನಲ್ಲಿ ಐದಾರು ಜನರು ಕುಳಿತು ಚರ್ಚೆ ನಡೆಸಲೂ ಸಹ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.
Comments