ಡಿ.ಕೆ. ಶಿವಕುಮಾರ್ ರವರ ಕ್ಷೇತ್ರ ಕನಕಪುರ ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಿದೆ

ಇಂಧನ ಸಚಿವ ಡಿ.ಕೆ. ಶಿವಕುಮಾರ್ ರವರ ಕ್ಷೇತ್ರವಾದ ಕನಕಪುರ ಅಭಿವೃದ್ಧಿವಿಷಯದಲ್ಲೂ ಮುಂದು ಹಾಗು ನರೇಗಾ ಅನುಷ್ಠಾನದಲ್ಲಿ ರಾಜ್ಯದ ಎಲ್ಲ ತಾಲೂಕುಗಳ ಪೈಕಿ ಕನಕಪುರ 129 ಕೋಟಿ 77 ಲಕ್ಷ ಅನುದಾನ ಬಳಸಿ ರಾಜ್ಯದಲ್ಲೂ ಪ್ರಥಮ ಸ್ಥಾನ ಗಳಿಸಿದೆ.
ನರೇಗಾ ಯೋಜನೆ ಸದ್ವಿನಿಯೋಗವಾಗುವಂತೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ರವರು ಹಾಗು ನಾನು ಸಾಕಷ್ಟು ಶ್ರಮವಹಿಸಿ ಪ್ರತಿ ಪಂಚಾಯಿತಿಮಟ್ಟದಲ್ಲಿ ಸಭೆಗಳನ್ನು ನಡೆಸಿ ಜನರಿಗೆ ಮಾಹಿತಿ ನೀಡಿ ನರೇಗಾ ಯೋಜನೆಯ ಸದುಪಯೋಗ ಪಡೆಸಿಕೊಳ್ಳುವಂತೆ ಮನವಿ ಮಾಡಿದ್ದರ ಪರಿಣಾಮ ಜನರು ವಿಶೇಷ ಆಸಕ್ತಿ ವಹಿಸಿಕೊಂಡು ತಾಲೂಕಿನಲ್ಲಿ 1248 ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿರುವುದರಿಂದ ತಾಲೂಕಿನ ಅಂತರ್ಜಲದ ಸಮಸ್ಯೆ ಬಹುಪಾಲು ಕಡಿಮೆಯಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದೆದೆ.
Comments