ಕತ್ತಲಿನಿಂದ ನಲುಗುತ್ತಿದ್ದ ನಾಲ್ಕು ಹಳ್ಳಿಗಳಿಗೆ ಬೆಳಕು ಭಾಗ್ಯ ನೀಡಿದ ಡಿ.ಕೆ. ಶಿವಕುಮಾರ್

ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದ ಪ್ರಗತಿ ಪರಿಶೀಲನೆ ಸಭೆ ನಡೆಸಿದರು, ಸಭೆಯಲ್ಲಿ ಹೆಸ್ಕಾಂ ವ್ಯಾಪ್ತಿಯ ಅಧಿಕಾರಿಗಳು ಭಾಗವಹಿಸಿದ್ದರು. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯು ( ಹೆಸ್ಕಾಂ) ಭೀಮಗಡ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯವಸ್ಥೆ ನೀಡಲು ಮುಂದಾಗಿದೆ. ಜನತೆಯ ಬೇಡಿಕೆಯ ಮೇರೆಗೆ ಈ ಸರಹದ್ದಿನಲ್ಲಿ ಹೆಮ್ಮಡಗಿ ಹಳ್ಳಿಯಿಂದ ಈಗಾಗಲೇ ಸೋಲಾರ್ ವಿದ್ಯುತ್ ವ್ಯವಸ್ಥೆ ನೀಡಲು ಮುಂದಾಗಿದ್ದು ಈಗಾಗಲೇ 160 ಸೋಲಾರ್ ವಿದ್ಯುತ್ ಕಂಬಗಳನ್ನು ಸ್ಥಾಪಿಸಲಾಗಿದ್ದು ಕತ್ತಲಿನಿಂದ ನಲುಗುತ್ತಿದ್ದ ನಾಲ್ಕು ಹಳ್ಳಿಗಳಿಗೆ ಹೆಸ್ಕಾಂನಿಂದ ಬೆಳಕು ಭಾಗ್ಯ ದೊರೆತಿದೆ.
Comments