ರಾಜ್ಯದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿ, ರಾಜಕೀಯ ಬೆಳವಣಿಗೆಯ ಬಗ್ಗೆ ಮಾತನಾಡಿದ ಎಚ್ ಡಿ ಕೆ

ವೈದ್ಯರ ಸಲಹೆಯ ಮೇರೆಗೆ ವಿಶ್ರಾಂತಿಯಲ್ಲಿದ್ದೆ. ಪ್ರತಿದಿನ ಮಾಧ್ಯಮಗಳಲ್ಲಿ ಎಲ್ಲ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಾ ಇದ್ದೆ. ಮನಸ್ಸಿನಲ್ಲಿರುವ ಬೇಗುದಿ ತಡೆಯಲಾರದೆ ಮಾಧ್ಯಮದ ಜೊತೆ ಮಾತನಾಡಲು ನಿರ್ಧರಿಸಿದೆ...
ಆಸ್ಪತ್ರೆಯಲ್ಲಿ ಮಾಧ್ಯಮದ ಜೊತೆ ಮಾತನಾಡುವಾಗ ಬಳಸಿದಂತಹ ಪದ ವಿವಾದಕ್ಕೆ ಇಡಾಗಿದೆ. ನನ್ನನ್ನು ಸಿಎಂ ಆವತ್ತು ಭೇಟಿಯಾಗಿ ಆರೋಗ್ಯ ಚೇತರಿಕೆಗೆ ಶುಭ ಹಾರೈಸಿದರು. ಅದಕ್ಕೆ ನಾನು ಕೈ ಜೋಡಿಸಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ನಗರದಲ್ಲಿಂದು ತನ್ನ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯ ಪ್ಯಾಕೇಜ್ ಕಾಮಗಾರಿ, ಟೆಂಡರ್ ಶೋರ್ ಸೇರಿ ನಾನಾ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ಹಣ ಲೂಟಿ ಮಾಡಿದೆ. ಈ ಹಣವನ್ನು ಹೊರರಾಜ್ಯಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಬಳಕೆಗೆ ಕಳುಹಿಸಲಾಗುತ್ತಿದೆ ಎಂದು ದೂರಿದರು.
ರಸ್ತೆ ಗುಂಡಿ ಮುಚ್ಚುವ ಸಂಬಂಧ ಬಿಜೆಪಿ ಬಿಬಿಎಂಪಿ ಆಡಳಿತ ನಡೆಸುವ ವೇಳೆ ಅಮೆರಿಕಾದ ಪೈತಾನ್ ವಾಹನವನ್ನು ಕೋಟ್ಯಂತರ ರೂ. ನೀಡಿ ಖರೀದಿ ಮಾಡಿದ್ದರು. ಆದರೆ, ಆ ವಾಹನ ಎಲ್ಲಿ ಹೋಗಿದೆ? ದಯವಿಟ್ಟು ಹುಡುಕಿ ಕೊಡಿ ಎಂದು ಕುಮಾರ ಸ್ವಾಮಿ ಹೇಳಿದರು.ಮೈಸೂರಿನಲ್ಲಿ ಬಿಜೆಪಿ-ಜೆಡಿಎಸ್ ನಾಯಕ ಬಗ್ಗೆ ಸಿಎಂ ಮಾತನಾಡಿ, ಹಿಂದಿನ ಮುಖ್ಯಮಂತ್ರಿ ಲೂಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಆ ಹಿಂದಿನ ಮುಖ್ಯಮಂತ್ರಿ ಯಾರೆಂದು ಹೇಳಬೇಕು ಎಂದರು.
Comments