ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ ಉಪೇಂದ್ರ ಏನೆದು ಕರೆ ಕೊಟ್ಟರು?

ರೈತರ ಸಮಸ್ಯೆಗಳ ಬಗ್ಗೆ ವಿಷಯ ತಜ್ಞರ ಜೊತೆ ಚರ್ಚೆ ನಡೆಸಿ, ಯುವಕರು ಆದಷ್ಟು ಹಳ್ಳಿಗಳಿಂದ ನಗರಗಳಿಗೆ ವಲಸೆ ಬರೋದನ್ನು ಬಿಟ್ಟು, ಹಳ್ಳಿಯಲ್ಲಿಯೇ ಬೇಸಾಯದಲ್ಲಿ ತೊಡಗಬೇಕು ಹಾಗೂ ಸಾವಯುವ ಪದ್ದತಿಯಲ್ಲಿ ಬೆಳೆ ಬೆಳೆಯುವುದನ್ನು ರೂಢಿಸಿಕೊಳ್ಳಬೇಕು ಅಂತ ಕರೆ ಕೊಟ್ಟರು.
ಇನ್ನು ಈ ವಾರ ಕೆಲವು ರೈತ ಮುಖಂಡರ ಜೊತೆ ಸಾವಯುವ ಕೃಷಿ, ಮಿಶ್ರ ಬೆಸಾಯ ಇನ್ನಿತರ ವಿಚಾರಗಳ ಜೊತೆ ಚರ್ಚೆ ಮಾಡಿದ ಉಪ್ಪಿ , ಇಂತಹಾ ಪದ್ದತಿಗಳಿಂದ ರೈತ ಯಾವತ್ತೂ ಆತ್ಮಹತ್ಯೆಗೆ ಒಳಗಾಗುವಂತಹ ಪರಿಸ್ಥಿತಿ ಬರೋದಿಲ್ಲ, ಶೂನ್ಯ ಬಂಡವಾಳದಿಂದ ಲಕ್ಷಗಟ್ಟಲೆ ಹಣ ಗಳಿಸಬಹುದು ಅನ್ನೋದನ್ನು ಉದಾಹರಣೆ ಸಮೇತ ವಿವರಿಸಿದರು. ಕುಮಾರಸ್ವಾಮಿ ಎಂಬ ರೈತರೊಬ್ಬರು ತಾವೂ ಕೂಡಾ ಇದೇ ರೀತಿಯಲ್ಲಿ ಬೆಳೆ ಬೆಳೆದಿರೋದನ್ನು ಅಂಕಿ ಅಂಶಗಳ ಸಹಿತ ಬಿಡಿಸಿಟ್ಟರು.
Comments