ಉಪೇಂದ್ರ ’ಪ್ರಜಾಕೀಯ ಪಕ್ಷದ ಬಗ್ಗೆ ಕಿಚ್ಚನ ಮೆಚ್ಚುಗೆಯ ಮಾತು

ರಿಯಲ್ ಸ್ಟಾರ್ ಉಪೇಂದ್ರ ಅವರು “ಪ್ರಜಾಕೀಯ”ದ ಆಲೋಚನೆಗಳು ನಿಜಕ್ಕೂ ಬೆರಗು ಮೂಡಿಸುತ್ತಿದೆ. ಮುಂದೆ ಈ ಪಕ್ಷ ಇನ್ನಷ್ಟು ಬೆರಗುಗೊಳಿಸುವುದು ಖಚಿತ ಎಂದು ಕಿಚ್ಚ ಸುದೀಪ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ….
ಹೊಸ ಪಕ್ಷದ ಬಗ್ಗೆ ಉಪೇಂದ್ರ ಅವರ ಆಲೋಚನೆಗಳು ಬೆರಗು ಮೂಡಿಸುತ್ತಿವೆ. ಅವರ ಪ್ರಜಾಕೀಯದ ಕಲ್ಪನೆ ಇಷ್ಟವಾಯ್ತು. ಅವರಿಗೆ ಯಶಸ್ಸು ಸಿಗಲಿ ಎಂದಿದ್ದಾರೆ. ಅಷ್ಟೇ ಅಲ್ಲ, ನನಗೆ ರಾಜಕೀಯ ಆಗಿಬರಲ್ಲ. ಇರುವಷ್ಟು ದಿನ ಸಾಮಾನ್ಯ ಮನುಷ್ಯನಾಗಿಯೇ ಇರಲು ಬಯಸುತ್ತೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.ಉಪೇಂದ್ರ ಅವರ ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತಿರುವುದು ಬಹಳ ಖುಷಿ ಆಗುತ್ತಿದೆ. ಅವರು ಅಂದುಕೊಂಡಿದ್ದನ್ನು ಮಾಡುವ ಉತ್ಸಾಹದಲ್ಲಿದ್ದಾರೆ. ಅವರಿಗೆ ನಮ್ಮ ಶುಭಾಶಯ ಇದ್ದೇ ಇರುತ್ತೆ. ಆದರೆ, ಪ್ರಚಾರ ಮಾಡುವುದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಯಾಕಂದ್ರೆ, ನನಗೆ ಗೊತ್ತಿಲ್ಲದರ ಬಗ್ಗೆ ನಾನು ಯಾವುತ್ತು ಪ್ರಾಮೀಸ್ ಮಾಡಲ್ಲ” ಎಂದು ಉಪ್ಪಿಯ ಹೊಸ ಹೆಜ್ಜೆಗೆ ವಿಶ್ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ಸುದ್ಧಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಆದರೆ ಸ್ವತಃ ಸುದೀಪ್ ಇದನ್ನು ನಿರಾಕರಿಸಿದ್ದರು. ಆದರೆ ಇದೀಗ ಉಪ್ಪಿಯ ಪ್ರಜಾಕೀಯದ ಬಗ್ಗೆ ಸುದೀಪ್ ಅವರು ಮಾತನಾಡಿ ಗಮನ ಸೆಳೆದಿದ್ದಾರೆ.
Comments