ಮಾವತ್ತೂರು ಕೆರೆಗೆ ಬಾಗಿನ ಅರ್ಪಿಸಿದ ಇಂಧನ ಸಚಿವ ಡಿ.ಕೆ. ಶಿವಕುಮಾರ್
ಇಂಧನ ಸಚಿವ ಡಿ.ಕೆ. ಶಿವಕುಮಾರ್ ರವರು ಮತ್ತು ಡಿ.ಕೆ. ಸುರೇಶ್ ರವರು ತುಂಬಿರುವ ಮಾವತ್ತೂರು ಕೆರೆಗೆ ಬಾಗಿನ ಸಲ್ಲಿಸಲಿದ್ದಾರೆ. ದೇಗುಲ ಮಠದ ಗುರುಗಳ ಮಾರ್ಗದರ್ಶನದಲ್ಲಿ ಈ ಶುಭ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರವಿ, ಜಿಲ್ಲಾಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು, ಮುಖಂಡರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಇಂಧನ ಸಚಿವ ಡಿ.ಕೆ. ಶಿವಕುಮಾರ್ ರವರು ಮತ್ತು ಡಿ.ಕೆ. ಸುರೇಶ್ ರವರು ತುಂಬಿರುವ ಮಾವತ್ತೂರು ಕೆರೆಗೆ ಬಾಗಿನ ಅರ್ಪಿಸಿದರು.
ಸಚಿವ ಡಿ.ಕೆ. ಶಿವಕುಮಾರ್ ರವರು ಮತ್ತು ಡಿ.ಕೆ. ಸುರೇಶ್ ರವರು ತುಂಬಿರುವ ಮಾವತ್ತೂರು ಕೆರೆಗೆ ಬಾಗಿನ ಸಲ್ಲಿಸಿದರು. ಮಳೆರಾಯನ ಕೃಪೆ ಯಿಂದ ಉತ್ತಮ ಮಳೆಯಾಗಿ ಎಲ್ಲಾ ಕೆರೆ ಕಟ್ಟೆಗಳು ತುಂಬಿ ಕೋಡಿಬಿದ್ದಿವೆ, ರೈತರ ಮೊಗದಲ್ಲಿ ಸಂತಸ ಅರಳಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಕೆರೆಗೆ ಬಾಗಿನ ನೆರವೇರಿಸಿ ಮಾತ ನಾಡಿದರು. ಕಳೆದ ಚುನಾವಣೆಯಲ್ಲಿ ಈ ಕೆರೆಯ ಅಚ್ಚುಕಟ್ಟುದಾರರು ಕೆರೆಯನ್ನು ತುಂಬಿಸಿಕೊಡಬೇಕೆಂದು ಮನವಿ ಮಾಡಿದ್ದರು. ಅದರಂತೆ ಸಂಸದ ಸುರೇಶ್ ಮತ್ತು ತಾವು ಸೇರಿ ಕೆರೆಯನ್ನು ತುಂಬಿಸುವ ಕೆಲಸ ಮಾಡಿ ಜನತೆಗೆ ಕೊಟ್ಟ ಮಾತನ್ನು ನಡೆಸಿದ್ದೇವೆ, ಆ ಕಾರಣದಿಂದ ಕೆರೆಯ ಅಚ್ಚುಕಟ್ಟುದಾರರೇ ಸೇರಿ ಸ್ವಂತ ಖರ್ಚಿನಿಂದ ಈ ಒಂದು ಬೃಹತ್ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ‘ಕಳೆದ ಚುನಾವಣೆ ವೇಳೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸುಮಾರು ₹1 ಸಾವಿರ ಕೋಟಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕೆಂದು ಭಾವಿಸಿದ್ದೆವು, ಆದರೆ ಅದಕ್ಕೂ ಅಧಿಕವಾಗಿ ಸುಮಾರು ಎರಡು ಸಾವಿರ ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೇವೆ’ ಎಂದು ಸಚಿವರು ತಿಳಿಸಿದರು. ನಂತರ ಮಾತನಾಡಿದ ಬೆಂಗಳೂರು ಗ್ರಾಮಾಂತರ ಸಂಸದರಾದ ಡಿ.ಕೆ.ಸುರೇಶ್ ರವರು ತಾಲ್ಲೂಕಿನಲ್ಲಿ ₹1,500 ಕೋಟಿ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ ರೂಪಿಸ ಲಾಗಿದೆ. ತಾಲ್ಲೂಕಿನ ಮಾವತ್ತೂರು ಕೆರೆಗೆ ಬಾಗಿನ ಸಮರ್ಪಣೆಗೆ ಮಂಗಳವಾರ ಕೆರೆಯ ಅಚ್ಚುಕಟ್ಟುದಾರರ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಹುತೇಕ ಕೆರೆ ತುಂಬಿಸುವ ಎಲ್ಲಾ ಕಾಮಗಾರಿಗಳು ಶೀಘ್ರವೇ ಪೂರ್ಣ ಗೊಳ್ಳಲಿವೆ ಎಂದರು.
Comments