ಕುಮಾರಸ್ವಾಮಿರವರ ಬಗ್ಗೆ ಮಗ ನಿಖಿಲ್ ಹೇಳಿದ್ದೇನು ಗೊತ್ತಾ ?

17 Oct 2017 9:50 AM |
1089 Report

ಈಗ ವಿಷ್ಯ ಏನಪ್ಪ ಅಂದ್ರೆ ಸ್ವತಃ ಅವರ ಪುತ್ರ ನಿಖಿಲ್ ಗೌಡ ಅಪ್ಪನ ಬಗ್ಗೆ ತಮ್ಮ ಫೇಸ್ಬುಕ್ ನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಹೌದು, ನಿಖಿಲ್ ಪೋಸ್ಟನ್ನು ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ನಂತರ ಆರೋಗ್ಯ ಸುಧಾರಿಸಿರುವ ವಿಚಾರ ನಿಮಗೆ ಗೊತ್ತಿದೆ. ಮೊದಲನೆಯದಾಗಿ ನಮ್ಮ ರಾಜ್ಯದ ಜನತೆಗೆ ನಮಸ್ಕಾರ. ತಮ್ಮೆಲ್ಲರ ಹಾರೈಕೆಯಿಂದ ನಮ್ಮ ತಂದೆಯವರು ಸಂಪೂರ್ಣವಾಗಿ ಗುಣಮುಖರಾಗುತ್ತಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಮತ್ತು ನನ್ನ ತಂದೆ ತಾಯಿ ಚಿರ ಋಣಿಯಾಗಿರುತ್ತೇವೆ ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಮ್ಮ ಕೆಲಸ ಕಾರ್ಯಗಳ ಒತ್ತಡದಿಂದಾಗಿ ತಂದೆ ತಾಯಿಗಳಿಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂದುಕೊಳ್ಳುವ ಮೊದಲು ಒಂದು ಕ್ಷಣ ಯೋಚಿಸಬೇಕಾದ ವಿಷಯವೇನೆಂದರೆ, ನಮಗೆ ಬರೀ ಸಮಯವಿಲ್ಲದಿರಬಹುದು ಆದರೆ ಅದೆಷ್ಟೋ ಜನರಿಗೆ ತಂದೆ ತಾಯಿಯರೇ ಇಲ್ಲ' ಎಂದಿದ್ದಾರೆ. ಪ್ರತಿಯೊಬ್ಬರಿಗೂ ಅವರ ತಂದೆ ತಾಯಿ ನಡೆದಾಡುವ ದೇವರಿದ್ದಂತೆ. ನಮ್ಮನ್ನು ಬೆಳೆಸುವಾಗ ತಂದೆ ತಾಯಿಗಳು ಯಾವ ಪ್ರತಿಫಲಾಪೇಕ್ಷೆಯನ್ನೂ ಇಟ್ಟುಕೊಂಡಿರುವುದಿಲ್ಲ. ಆದ್ದರಿಂದ ನಮ್ಮ ಕಣ್ಮುಂದಿರುವ ತಂದೆ ತಾಯಿಯರ ಜೊತೆಗೆ ಆದಷ್ಟು ಹೆಚ್ಚಿನ ಸಮಯ ಕಳೆಯಿರಿ ಎಂದು ನಿಖಿಲ್ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

Edited By

Shruthi G

Reported By

hdk fans

Comments