ಮಾಗಡಿ ಶಾಸಕ ಬಾಲಕೃಷ್ಣ ಪಿಎ ಬಂಡವಾಳ ಬಟ್ಟ ಬಯಲು ಮಾಡಿದ ಜೆಡಿಎಸ್ ಮುಖಂಡರು

14 Oct 2017 5:59 PM |
8105 Report

ಬಡವವರಿಗೆ ನೀಡಬೇಕಾದ ಆಶ್ರಯ ಮನೆ ಯೋಜನೆಯ ಹಕ್ಕು ಪತ್ರವಿತರಣೆಯಲ್ಲಿ ಮಾಗಡಿ ಶಾಸಕ ಬಾಲಕೃಷ್ಣ  ಅವರ ಪಿಎ ಬಡವರಿಂದ ಹಣ ವಸೂಲಿ ಮಾಡಿ ನಕಲಿ ಹಕ್ಕುಪತ್ರ ವಿತರಿಸಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿ.ನರಸಿಂಹಮೂರ್ತಿ ದಾಖಲೆ ಬಿಡುಗಡೆಗೊಳಿಸಿ ನೇರ ವಾಗ್ದಾಳಿ ನಡೆಸುವ ಮೂಲಕ ಆರೋಪಿಸಿದರು. ……

 

ಈ ಬಗ್ಗೆ ಮಾತನಾಡಿದ ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿ.ನರಸಿಂಹಮೂರ್ತಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿರುವ ಸಂದರ್ಭದಲ್ಲಿ , ಮಾಗಡಿ ಶಾಸಕರು ಈ ರಾಷ್ಟ್ರದಲ್ಲಿ ಯಾವುದೇ ಜನಪ್ರತಿನಿಧಿಗಳು ಇಟ್ಟುಕೊಳ್ಳದಷ್ಟು ಆಪ್ತ ಸಹಾಯಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಪಂಚಾಯ್ತಿ ಮಟ್ಟದಲ್ಲಿ ವಸೂಲಿಗೆ ಇಳಿದ್ದಿದ್ದಾರೆ, ಇವರ ಅಕ್ರಮಗಳನ್ನು ಬಯಲು ಮಾಡುವಂತೆ ಅವರ ಬೆಂಬಲಿಗರು ದೂರವಾಣಿ ಮೂಲಕ ಮಾಹಿತಿ ನೀಡುವ ಜೊತೆಗೆ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಹೇಳುತ್ತಿದ್ದಾರೆ, ಯಾವುದೋ ನಾಲ್ಕೈದು ಕ್ರಿಮಿನಲ್ ಹಿನ್ನಲೆಯ ಹಿಂಬಾಲಕರ ಬೆದರಿಕೆಗೆ ತಲೆ ಕೆಡಿಸಿಕೊಳ್ಳದೇ ಮಾಗಡಿ ಶಾಸಕರ ಒಂದೊಂದೆ ಹಗರಣವನ್ನು ಬಿಚ್ಚಿಡುವುದಾಗಿ ಹೇಳಿದರು.

ನಾನು ಮಾಗಡಿ ಕ್ಷೇತ್ರದ ಮತದಾರ, ನಾನು ಮತ ಹಾಕಿದ್ದರಿಂದ ಶಾಸಕ ಬಾಲಕೃಷ್ಣ ಮತ್ತು ಅವರ ಸಹೋದರ ಗೆದ್ದು ಶಾಸಕ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾರೆ, ಜೆಡಿಎಸ್ ಚಿಹ್ನೆಯಡಿ ಗೆಲವು ಸಾಧಿಸಿ ಜೆಡಿಎಸ್ ವರಿಷ್ಟರನ್ನು ಟೀಕಿಸುವುದು ನಿಲ್ಲಿಸಬೇಕು, ಮತದಾರನಾಗಿ ರಾಜೀನಾಮೆ ಕೇಳುತ್ತೇನೆ, ಹಿಂಬಾಲಕರ ಗೊಡ್ಡು ಬೆದರಿಕೆಗೆ ಬೆದರುವುದಿಲ್ಲ ಎಂದು ಸವಾಲು ಹಾಕಿದರು.

 

 

Edited By

Suresh M

Reported By

jds admin

Comments