ಬ್ರಹ್ಮಾಂಡ ಗುರೂಜಿ ಭವಿಷ್ಯದ ಬಗ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ದೇವೇಗೌಡರು
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಗೌಡರು….
ಒಬ್ಬೊಬ್ಬರ ಭಾವನೆ, ನಂಬಿಕೆ ಒಂದು ರೀತಿ ಇರುತ್ತದೆ. ನಾನು ದೇವರು ಮತ್ತು ಜ್ಯೋತಿಷ್ಯವನ್ನು ನಂಬುತ್ತೇನೆ. ದೇವರ ಆಶೀರ್ವಾದ ಪಡೆದೇ ನನ್ನ ರಾಜಕೀಯ ಜೀವನ ಆರಂಭಿಸಿದೆ. ದೇವರು, ಜನರ ಅನುಗ್ರಹ ಇದ್ದರೆ ಕುಮಾರಸ್ವಾಮಿ ಅಧಿಕಾರ ಹಿಡಿಯಬಹುದು.
ಸಿದ್ದರಾಮಯ್ಯ ಮರಳಿ ಜೆಡಿಎಸ್‍ಗೆ ಬರುವ ವದಂತಿ ಬಗ್ಗೆ ಕೇಳಿದಾಗ ಹಾಗೆಲ್ಲಾ ಲಘುವಾಗಿ ಯಾರೂ ಮಾತನಾಡಬೇಡಿ, ಅವರು ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಬಹುದು ಎಂದು ಹೇಳಿದ್ದಾರೆ.
Comments