ಪ್ರಧಾನಿ ಮೋದಿ ಸೂ.. ಮಗ ಎಂದ ರೋಷನ್ ಬೇಗ್ ಹೇಳಿಕೆಗೆ ಗೌಡರ ಪ್ರತಿಕ್ರಿಯೆ
ಮೋದಿ ವಿರುದ್ದ ಬೇಗ್ ಅವಾಚ್ಯ ಪದಗಳನ್ನು ಬಳಸಿದ ಬಗ್ಗೆ ಹಾಸನದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ....
ಯಾರು ಈ ರೀತಿ ಅವಾಚ್ಯ ಶಬ್ದ ಬಳಕೆ ಮಾಡಬಾರದು. ಇದು ರೋಷನ್ ಬೇಗ್ ಘನತೆಗೆ ತಕ್ಕದಲ್ಲ ಈ ವಿಚಾರ ಚರ್ಚೆಯಾಗಲಿ ಸಿಎಂ ಆಗಲಿ ಪಿಎಂ ಆಗಲಿ ಯಾರ ವಿರುದ್ದವೂ ಈ ರೀತಿ ಪದ ಬಳಕೆ ಸರಿಯಲ್ಲ ಎಂದು ಎಚ್ ಡಿ ದೇವೇಗೌಡರು ಪ್ರತಿಕ್ರಿಯಿಸಿದರು.ಬಹಿರಂಗ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಶಬ್ಧ ಬಳಸಿ ಸಚಿವ ರೋಷನ್ ಬೇಗ್ ಅವರು ಹೊಸದೊಂದು ವಿವಾದ ಹುಟ್ಟು ಹಾಕಿದ್ದಾರೆ.
ಪುಲಕೇಶಿ ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ತಮಿಳು ಭಾಷೆಯಲ್ಲಿ ಮಾತನಾಡಿದ ಸಚಿವ ಬೇಗ್ ನೋಟು ಅಪನಗದೀಕರಣ ವಿಚಾರದ ಕುರಿತು ವಾಗ್ದಾಳಿ ನಡೆಸುವ ವೇಳೆ ಉತ್ಸಾಹದ ಭರದಲ್ಲಿ ತೀರಾ ಕೀಳು ಶಬ್ಧ ಪ್ರಯೋಗಿಸಿದ್ದಾರೆ.
Comments