ಕುಮಾರಣ್ಣನ ಅರೋಗ್ಯ ವಿಚಾರಿಸಿದ ಹ್ಯಾಟ್ರಿಕ್ ಹೀರೋ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೃದಯಕ್ಕೆ ಸಂಬಂಧಿಸಿದ ಲ್ಯಾಪ್ರೋಸ್ಕೋಪಿಕ್ ಕೀ ಹೋಲ್ ಶಸ್ತ್ರಚಿಕಿತ್ಸೆಯನ್ನು ಅಪೋಲೋ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಿದ ಸಂದರ್ಭದಲ್ಲಿ ಹಲವಾರು ಅಭಿಮಾನಿಗಳು , ಕಾರ್ಯಕರ್ತರು ಕುಮಾರಣ್ಣನ ಅರೋಗ್ಯ ವಿಚಾರಿಸಿದ್ದರು. ಅದೇರೀತಿ ಇದೀಗ ಹ್ಯಾಟ್ರಿಕ್ ಹೀರೋ ಶಿವಣ್ಣ ಎಚ್ ಡಿಕೆ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಇತ್ತೀಚಿಗಷ್ಟೇ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜೆಪಿ ನಗರದ ನಿವಾಸಕ್ಕೆ ಶಿವರಾಜ್ ಕುಮಾರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ನಟ ಶಿವರಾಜ್ ಕುಮಾರ್ ಜೊತೆ ಸೊರಬ ಶಾಸಕ ಮಧು ಬಂಗಾರಪ್ಪ ಇದ್ದರು. ಕುಮಾರಸ್ವಾಮಿ ಅವರೊಂದಿಗೆ ಅರ್ಧಗಂಟೆಗಳ ಕಾಲ ಶಿವರಾಜ್ ಕುಮಾರ್ ಮಾತುಕತೆ ನಡೆಸಿದರು. ನಂತರ ಶಿವಣ್ಣ ಸಾಕಷ್ಟು ದಿನ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದರು.
Comments