ಜೆಡಿಎಸ್ ನ ರೆಬಲ್ ಶಾಸಕರಿಗೆ ಟಾಂಗ್ ಕೊಟ್ಟ ದೇವೇಗೌಡ್ರು

ನಾನು ಮತ್ತು ಕುಮಾರಸ್ವಾಮಿ ಭಾಷಣ ಮಾಡುವಾಗ ಟಿವಿಯಲ್ಲಿ ಮುಖ ತೋರಿಸಲು ನಮ್ಮ ಹಿಂದೆ ಬಂದು ನಿಂತುಕೊಳ್ಳುವುದಿಲ್ಲ, ಕುಮಾರಣ್ಣ, ನಿಮ್ಮ ಅಪ್ಪನನ್ನು ಬಿಟ್ಟು ಬಾ…….
ನಾವು ಮತ್ತೆ ನಿಮ್ಮನ್ನು ಸಿಎಂ ಮಾಡುತ್ತೇವೆ ಎಂದವರೆಲ್ಲ ಈಗ ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ಜೆಡಿಎಸ್ ರೆಬಲ್‌ಗಳಿಗೆ ಪರೋಕ್ಷವಾಗಿ ದೇವೇಗೌಡರು ಟಾಂಗ್ ಕೊಟ್ಟರು. ಅಂದು ಕುಮಾರಸ್ವಾಮಿಯನ್ನು ಸಿಎಂ ಮಾಡುತ್ತೇವೆ ಎಂದವರು ಈಗ ಕುಮಾರಸ್ವಾಮಿಯವರಿಗೆ ಪಂಥಾಹ್ವಾನ ನೀಡುತ್ತಿದ್ದಾರೆ. ರಾಮನಗರದಲ್ಲಿ ಗೆದ್ದು ತೋರಿಸಲಿ ಸಾಕು ಎನ್ನುತ್ತಿದ್ದಾರೆ. ರಾಜ್ಯದ ಜನ ನಮ್ಮೊಂದಿಗೆ ಇದ್ದಾರೆ. ನೂರಕ್ಕೆ ನೂರು ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ಗೌಡರು ಭವಿಷ್ಯ ನುಡಿದರು.
Comments