ಜಮೀರ್‌ಗೆ ಮೀಟ್ರಿದ್ರೆ ತವರೂರಿನಲ್ಲಿ ಚುನಾವಣೆಗೆ ಸ್ಪರ್ಧಿಸಲಿ, ರೇವಣ್ಣ ಸವಾಲ್

"ರೇವಣ್ಣಗೆ ಮೀಟರ್ ಇದ್ದರೆ 2018ರ ಚುನಾವಣೆಯಲ್ಲಿ ಚಾಮರಾಜಪೇಟೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ' ಎಂಬ ಶಾಸಕ ಜಮೀರ್ ಅಹಮದ್ ಸವಾಲಿಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಪ್ರತಿಕ್ರಿಯಿಸಿದ ಅವರು……
"ಹೊಳೆನರಸೀಪುರ ನನ್ನ ರಾಜಕೀಯ ಜನ್ಮ ಸ್ಥಳ, ನನ್ನ ಕಾರ್ಯಕ್ಷೇತ್ರ. ಅದನ್ನು ಬಿಟ್ಟು ನಾನೆಲ್ಲೂ ಹೋಗಲ್ಲ. ಜಮೀರ್ ಅಹಮದ್‌ಗೆ ಮೀಟರ್ ಇದ್ರೆ ಅವರ ತವರೂರು ಕುಣಿಗಲ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿಗೆಲ್ಲಲಿ ನೋಡೋಣ' ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಶಾಸಕ ಜಮೀರ್ ಅಹಮದ್‌ಗೆ ಪ್ರತಿ ಸವಾಲು ಹಾಕಿದರು.
ನಮ್ಮ (ಜೆಡಿಎಸ್) ಹಂಗಿನಲ್ಲಿ ಅನ್ನ ತಿನ್ನುತ್ತಿರುವ ಜಮೀರ್ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆನಂತರ ತಮ್ಮ ಬಗ್ಗೆ ಮಾತನಾಡಲಿ' ಎಂದು ತಿರುಗೇಟು ನೀಡಿದರು. "ಕಾಂಗ್ರೆಸ್‌ಗೆ ಸೇರಿಸಿಕೊಂಡು ಮುಸ್ಲಿಂ ನಾಯಕನನ್ನು ಮಾಡಲು ಹೊರಟಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಜಮೀರ್‌ಗೆ ಹೇಳಿ ಕಾಂಗೆ›ಸ್ ಪಕ್ಷದ ಘನತೆ ಉಳಿಸಲಿ. ಆನಂತರ ಕಾಂಗ್ರೆಸ್ ಮೀಟರ್ ರೈಸ್ ಮಾಡಲು ಜಮೀರ್ ನನ್ನು ಬಳಸಿಕೊಳ್ಳಲಿ. ನಾವೇನೂ ಬೇಡ ಅನ್ನುವುದಿಲ್ಲ ' ಎಂದು ರೇವಣ್ಣ ವ್ಯಂಗ್ಯವಾಡಿದರು.
Comments