ಸಮೀಕ್ಷೆ ಪ್ರಕಾರ ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಪಾಲು

ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆಂದು ಹೇಳುತ್ತಿದ್ದಾರೆ. ಆದರೆ ಅವರು ವರುಣ ಕ್ಷೇತ್ರ ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುತ್ತಿರುವುದಾದರೂ ಏತಕ್ಕೆ, ಒಂದು ವೇಳೆ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದೇ ಆದರೆ ಸಿದ್ದರಾಮಯ್ಯ ನವರ ಸೋಲು ಕಟ್ಟಿಟ್ಟ ಬುತ್ತಿ. ಚಾಮುಂಡೇಶ್ವರಿ ಜೆಡಿಎಸ್ ಭದ್ರಕೋಟೆ....
ಅದು ಎಂದಿಗೂ ಕಾಂಗ್ರೆಸ್ ಪಾಲು ಆಗುವುದಿಲ್ಲ ಜಿ.ಟಿ.ದೇವೇಗೌಡ ಎಂದು ವಾಗ್ದಾಳಿ ನಡೆಸಿದರು.ಆದೆರೆ ಈಗ ಜನರ ಸಮೀಕ್ಷೆಯ ಪ್ರಕಾರ ಸಿದ್ದರಾಮಯ್ಯ ಅವರಿಗೆ 2006ರಲ್ಲಿ ಪುನರ್ಜನ್ಮ ನೀಡಿದ ಕ್ಷೇತ್ರದಿಂದಲೇ ಅವರಿಗೆ ಸೋಲು ಎನ್ನುತ್ತಿದೆ ಈ ಸಮೀಕ್ಷೆ. ನಾಲ್ಕು ವರ್ಷದಿಂದ ಚಾಮುಂಡೇಶ್ವರಿ ಕ್ಷೇತ್ರವನ್ನು ಮರೆತಿದ್ದೇ ಇದಕ್ಕೆ ಕಾರಣ ಎನ್ನುತ್ತಿದೆ ಸಮೀಕ್ಷೆ.ಜೆಡಿಎಸ್ ಯಾಕೆ ಇಲ್ಲಿ ಗೆಲುವು ಕಾಣುತ್ತೆ ಎನ್ನುವುದಕ್ಕೆ ಇಲ್ಲಿದೆ ಉತ್ತರ ಕ್ಷೇತ್ರದ ಜನರಲ್ಲಿ ಎಚ್ ಡಿ ಕುಮಾರಸ್ವಾಮಿಯವರಿಗೆ ಒಂದು ಅವಕಾಶ ಕೊಡಬೇಕೆಂಬ ಮಾತು ಕೇಳಿಬರುತ್ತಿದೆ. ಜೆಡಿಎಸ್ ನ ರೈತರ ಸಾಲ ಮನ್ನಾ ಘೋಷಣೆಯು ಈ ಕ್ಷೇತ್ರದಲ್ಲಿ ತುಂಬಾ ಪ್ರಭಾವಿಯಾಗಿ ಕೆಲಸ ಮಾಡುತ್ತಿದೆ. ಜಿ.ಟಿ.ದೇವೇಗೌಡರು ನಮ್ಮ ಚಾಮುಂಡೇಶ್ವರಿ ಕ್ಷೇತ್ರದ ಹೆಮ್ಮೆಯ ಮಗ. ಹೆಮ್ಮೆಯ ಶಾಸಕರು, ಅಭಿವೃದ್ಧಿಯ ಹರಿಕಾರರು. ಯಾರೇ ಬಂದರೂ ಪ್ರಬುದ್ಧ ಮತದಾರರ ಒಲವು ಇರುವುದು ಜಿಟಿಡಿ ಅವರ ಮೇಲೆ…
Comments