ಬೆಂಗಳೂರಿನಲ್ಲೂ ಟ್ರಿಣ್ ಟ್ರಿಣ್ ಬೈಸಿಕಲ್ ಯೋಜನೆಗೆ ನಿರ್ಧಾರ

09 Oct 2017 12:49 PM |
2455 Report

ಮೈಸೂರಿನಲ್ಲಿ ಯಶಸ್ವಿಯಾಗಿರುವ ಟ್ರಿಣ್-ಟ್ರಿಣ್ ಸೈಕಲ್ ಯೋಜನೆ ಬೆಂಗಳೂರಿನಲ್ಲಿಯೂ ಜಾರಿಗೆ ಬರಲಿದೆ. ನಗರದ 6ಪ್ರಮುಖ ಸ್ಥಳಗಳಲ್ಲಿ 6000ಸೈಕಲ್‌ಗಳು ಬಾಡಿಗೆಗೆ ಸಿಗಲಿವೆ.

ಕಳೆದವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಟ್ರಿಣ್-ಟ್ರಿಣ್ ಯೋಜನೆ ಜಾರಿಗೆಗೆ ಒಪ್ಪಿಗೆ ಸಿಕ್ಕಿದೆ. ಎಂ.ಜಿ.ರಸ್ತೆ, ಇಂದಿರಾ ನಗರ ಸೇರಿದಂತೆ 6ಪ್ರಮುಖ ಸ್ಥಳಗಳಲ್ಲಿ ಯೋಜನೆಯಡಿ ಸೈಕಲ್ ಸ್ಟಾಂಡ್ ನಿರ್ಮಿಸಿ, ಸೈಕಲ್‌ಗಳನ್ನು ಬಾಡಿಗೆಗೆ ಇಡಲಾಗುತ್ತದೆ.  ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಕೋರಮಂಗಲ,ಬಾಣಸವಾಡಿ,ಎಚ್ಆರ್‌ಬಿಆರ್ ಲೇಔಟ್,ಎಚ್‌ಎಸ್‌ಆರ್ ಲೇಔಟ್,ಎಂ.ಜಿ.ರಸ್ತೆ,ಇಂದಿರಾ ನಗರದಲ್ಲಿ ಸೈಕಲ್ಗಳು ಸಿಗಲಿವೆ.

Edited By

Hema Latha

Reported By

congress admin

Comments