ಚುನಾವಣೆಗೆ ಸ್ಪರ್ಧಿಸದಂತೆ ಕೊಲೆ ಬೆದರಿಕೆಯೂಡ್ಡಿದ ಜೆಡಿಎಸ್ ಶಾಸಕ

09 Oct 2017 11:49 AM |
2456 Report

ಇದ್ಯಾವುದೇ ನಟೋರಿಸ್ ರೌಡಿಯದ್ದಾಗಲೀ, ಗ್ಯಾಂಗಸ್ಟರ್ನಿಂದಾಗಲೀ,ಭೂಗತ ಲೋಕದ ಪಾತಕಿಯಿಂದಾಗಲೀ ಬಂದ ಕೊಲೆಬೆದರಿಕೆಯಲ್ಲ. ಇದು ಒಂದು ಕ್ಷೇತ್ರದ ಜವಾಬ್ದಾರಿಯುತ,ಜನರ ಸಂಕಷ್ಟವನ್ನು ಪರಿಹರಿಸಿ ನ್ಯಾಯ ಒದಗಿಸಬೇಕಾದ ಶಾಸಕನೊಬ್ಬ ಬಡ ಶಿಕ್ಷಕಿಗೆ ಹಾಕಿದ ಕೊಲೆ ಬೆದರಿಕೆ.ಇದು ಜೆಡಿಎಸ್ ಪಕ್ಷದ ನೆಲಮಂಗಲ ಶಾಸಕ ……

ಶ್ರೀನಿವಾಸ ಮೂರ್ತಿ ಯಾವುದೇ ನಟೋರಿಯಸ್ ರೌಡಿಗಿಂತಲೂ ಕಮ್ಮಿ ಇಲ್ಲದಂತೆ ಒಬ್ಬಳು ಮಹಿಳೆಯನ್ನು `ನೀನು ನೆಲಮಂಗಲಕ್ಕೆ ಬಂದರೆ ಕೊಚ್ಚಿ ಕೊಲೆ ಮಾಡುತ್ತೇನೆಎಂದು ಅವಾಚ್ಯ ಶಬ್ದಗಳನ್ನು ಬಳಸಿ ಅಬ್ಬರಿಸುವ ಜೆಡಿಎಸ್ ಶಾಸಕ ಶ್ರೀನಿವಾಸ ಮೂರ್ತಿಯ ಮೇಲೆರಾಜ್ಯದೆಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.ನೆಲಮಂಗಲದ ಸರಕಾರಿ ಶಾಲಾ ಶಿಕ್ಷಕಿ ಶಿವಕುಮಾರಿ ಎಂಬವರು ನೆಲಮಂಗಲದ ಭ್ರಷ್ಟಾಚಾರ ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿ ಖಂಡಿಸಿ ಫೇಸ್ಬುಕ್ ನಲ್ಲಿ ಸ್ಟೇಟಸ್ ಹಾಗೂ ವಿಡಿಯೋ ಅಪ್ಲೋಡ್ ಮಾಡಿದ್ದರು. ಇದರಿಂದ ಕುಪಿತನಾದ ಜೆಡಿಎಸ್ ಶಾಸಕ ಶ್ರೀನಿವಾಸ ಮೂರ್ತಿ ಶಿವಕುಮಾರಿ ಅವರ ಅಣ್ಣ ರಾಜು ಎಂಬವರನ್ನು ಕರೆಸಿ ಮಾತಾಡಿ, ಈಕೆ ಚುನಾವಣೆಯಲ್ಲಿ ಕಂಟೆಸ್ಟ್ ಮಾಡಿದ್ರೆ ಕೆಲಸವನ್ನು ಕಳೆದು ಕೊಳ್ಳುತ್ತಾಳೆ. ಸುಮ್ನೆ ಇದನ್ನೆಲ್ಲಾ ಬಿಟ್ಟು ಸೈಲೆಂಟಾಗಿ ಇರೋದಕ್ಕೆ ಹೇಳೋದು ಒಳ್ಳೇದು ಇಲ್ಲ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಶಿವಕುಮಾರಿ ಆರೋಪಿಸಿದ್ದಾರೆ.


ಶಾಸಕರು ತೋರಿದ ದರ್ಪಕ್ಕೆ ಸಂಬಂಧಿಸಿ ತನ್ನ ಬಳಿ ಎಲ್ಲಾ ದಾಖಲೆಗಳಿದ್ದು, ಅದನ್ನೆಲ್ಲಾ ರಿಲೀಸ್ ಮಾಡ್ತೀನಿ, ಅಲ್ಲದೆ ಈ ಬಾರಿ ನೆಲಮಂಗಲ ಮೀಸಲು ಕ್ಷೇತ್ರದಿಂದಲೇ ಕಂಟೆಸ್ಟ್ ಮಾಡ್ತೀನಿ ಅಂತ ಸವಾಲನ್ನು ಹಾಕಿದ್ದಾರೆ. ಅಲ್ಲದೆ ನನ್ನ ಮೇಲೆ ಒತ್ತಡವನ್ನೂ ಹಾಕಲಾಗಿದೆ. ಇದಕ್ಕಾಗಿ ನಾನು ಮಾಧ್ಯಮಗಳ ಮುಂದೆ ಹೋಗುತ್ತೇನೆ ಎಂದಾಗ, ರಿಪೋರ್ಟ್ ಮಾಡಿ ಎಂದು ಹೇಳಿಕೆ ಬದಲಾಯಿಸಿದ್ದಾರೆ ಎಂದು ಶಿವಕುಮಾರಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜಾಲತಾಣಗಳಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವೂ ಇಲ್ಲವೇ ಎಂದು ಶಿವಕುಮಾರಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಮೂರ್ತಿ, ತಾನೂ ಯಾವುದೇ ಬೆದರಿಕೆಯೊಡ್ಡಿಲ್ಲ ಎಂದು ಹೇಳಿದ ಅವರು ತಮ್ಮ ಬಂಡವಾಳ ಬಯಲಾದಮೇಲೆ ತನ್ನ ರಾಗವನ್ನೇ ಬದಲಾಯಿಸಿದ್ದಾರೆ.ಈ ರೀತಿ ವರ್ತಿಸುತ್ತಿರುವುದು ಸರಿಯೇ ಈ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇ ಗೌಡ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಏನು ಹೇಳುತ್ತಾರೆ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

Edited By

Shruthi G

Reported By

Admin bjp

Comments