ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿ ಇರುವ ಸದಸ್ಯರ ಹೆಸರುಗಳು
ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ಮುನ್ನ ನಡೆದ ಚರ್ಚೆ ವೇಳೆ ಕಾಂಗ್ರೆಸ್ ಪಕ್ಷ 4 ಸಮಿತಿಗಳ ಉಸ್ತುವಾರಿ ಹೊತ್ತು ಜೆಡಿಎಸ್‌ಗೆ 4 ಸಮಿತಿಗಳು ಹಾಗೂ ಪಕ್ಷೇತರರಿಗೆ ಉಳಿದ 4 ಸಮಿತಿಗಳನ್ನು ಬಿಟ್ಟುಕೊಡುವ ಬಗ್ಗೆ 2 ಪಕ್ಷಗಳ ವರಿಷ್ಠರಲ್ಲಿ ಒಪ್ಪಂದವಾಗಿತ್ತು.....
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯಂಥಹ ಪ್ರಮುಖ ಸಮಿತಿಗಳನ್ನು ತಮಗೆ ನೀಡುವಂತೆ ಜೆಡಿಎಸ್ ವರಿಷ್ಠರು ಕಾಂಗ್ರೆಸ್ ಮುಖಂಡರಲ್ಲಿ ತೀವ್ರ ಒತ್ತಡ ಹೇರಿದ್ದಾರೆ.
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಗೃಹ ಸಚಿವ ರಾಮಲಿಂಗಾರೆಡ್ಡಿಯವರು ಭರವಸೆ ನೀಡಿದ್ದರೂ ಅಂಥಹ ಪ್ರಮುಖ ಸಮಿತಿಯನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಕಾಂಗ್ರೆಸ್ ಸದಸ್ಯರಲ್ಲೇ ಅಪಸ್ವರ ಕಾಣಿಸಿದೆ.ಈ ಮಧ್ಯೆ ನಿಮಗೆ ಜೆಡಿಎಸ್ ವರಿಷ್ಠರು ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿರುವುದರಿಂದ 6 ಸ್ಥಾಯಿ ಸಮಿತಿಗಳನ್ನು ತಮಗೆ ನೀಡಬೇಕೆಂದು ಒತ್ತಡ ಹೇರಲಾರಂಭಿಸಿದ್ದಾರೆ.
ಜೆಡಿಎಸ್ ಪಕ್ಷದಲ್ಲೂ ಸಮಿತಿಗಳ ಅಧ್ಯಕ್ಷ ಸ್ಥಾನ ಪಡೆಯಲು ಇನ್ನಿಲ್ಲದ ಪೈಪೋಟಿ ಆರಂಭವಾಗಿದೆ. ಕಳೆದ ಎರಡು ವರ್ಷಗಳಿಂದ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು 8 ಮಂದಿ ಅನುಭವಿಸಿದ್ದಾರೆ. ಆದರೆ ಆರು ಮಂದಿ ಸದಸ್ಯರಿಗೆ ಯಾವುದೇ ಸಮಿತಿಗಳ ಅಧ್ಯಕ್ಷ ಸ್ಥಾನ ನೀಡಿಲ್ಲ. ಹಾಗಾಗಿ ಆ ಸದಸ್ಯರಿಗೆ ಈ ಬಾರಿ ಸಮಿತಿಗಳ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಗಂಭೀರ ಚಿಂತನೆ ನಡೆಸಿದ್ದಾರೆ.ಕಾವೇರಿ ಪುರ ವಾರ್ಡ್‌ನ ಪ್ರಮೀಳಾ ಉಮಾಶಂಕರ್, ಶಕ್ತಿಗಣಪತಿ ನಗರದ ಗಂಗಮ್ಮ, ಮಾರಪ್ಪನಪಾಳ್ಯ ವಾರ್ಡ್‌ನ ಮಹದೇವ್, ವಿಶ್ವನಾಥ ನಾಗೇನಹಳ್ಳಿಯ ರಾಜಶೇಖರ್, ಪಾದರಾಯನ ಪಾಳ್ಯ ಇಬ್ರಾಹಿಂ ಪಾಶ್, ಉಮೇಸಲ್ಮಾನ್ ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ದೇವಗೌಡರು ಒಲವು ತೋರಿಸಿದ್ದಾರೆ ಎನ್ನಲಾಗಿದೆ.
Comments