ಕಾಂಗ್ರೆಸ್-ಬಿಜೆಪಿಗೆ ದೇವೇಗೌಡರ ಭಯ ಶುರುವಾಗಿದೆಯಂತೆ
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ದೇವೇಗೌಡರ ಭಯ ಕಾಡುತ್ತಿದೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮದೇ ಧಾಟಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಲೇವಡಿ ಮಾಡಿದ್ದು ಹೀಗೆ....
ನಾಯಕ್, ವಿಶ್ವಕರ್ಮ ಸೇರಿ ಸಣ್ಣ ಸಣ್ಣ ಸಮುದಾಯಗಳ ಬಗ್ಗೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಕಾಳಜಿ ಇರಲಿಲ್ಲ. ನಾನು ಆ ಸಮುದಾಯಗಳ ಸಮಾವೇಶ ಮಾಡಿದ ನಂತರ ಎಚ್ಚೆತ್ತುಕೊಂಡಿವೆ. ಆ ಸಮುದಾಯಗಳು ದೇವೇಗೌಡರ ಪರ ವಾಲಿಬಿಟ್ಟರೆ ಎಂಬ ಭಯ ಕಾಂಗ್ರೆಸ್, ಬಿಜೆಪಿಗಿದೆ. ಆದರೆ ಇದರಿಂದ ದೃತಿಗೆಡಬೇಕಿಲ್ಲ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ನಮ್ಮ ಸಾಧನೆ ತಿಳಿಸುವ ಕೆಲಸವನ್ನು ಶಾಸಕರಿಂದ ಹಿಡಿದು ಕಾರ್ಯಕರ್ತರವರೆಗೆ ಮಾಡಬೇಕೆಂದು ತಿಳಿಸಿದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಜೆಡಿಎಸ್ ಕಣಕ್ಕಿಳಿಯಲಿದ್ದು ನಮ್ಮ ಅಳಿವು- ಉಳಿವಿನ ಪ್ರಶ್ನೆಯಾಗಿದೆ ಎಂದು ಹೇಳಿದರು. ಮುಂದಿನ ಚುನಾವಣೆಯನ್ನು ಜೆಡಿಎಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಎಲ್ಲ ಕಡೆ ಸ್ಪರ್ಧಿಸಿ ನಮ್ಮ ಶಕ್ತಿ ಪ್ರದರ್ಶನ ಮಾಡಲೇಬೇಕಾಗಿದೆ ಎಂದು ತಿಳಿಸಿದರು.
Comments