ಜೆಡಿಎಸ್ ಸರ್ಕಾರ ಬಂದರೆ ನಿರುದ್ಯೋಗಿ ಯುವಕರಿಗೆ ಸರ್ಕಾರಿ ಕೆಲಸ ಕೊಡಲು ಕುಮಾರಣ್ಣ ಮಾಡಿರುವ ಐಡಿಯಾ ಏನು ಗೊತ್ತಾ !!

ಇಡೀ ವಿಶ್ವದಲ್ಲೇ ಸಾಫ್ಟ್ವೇರ್ ಉದ್ಯೋಗದಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ನಂಬರ್ ಒನ್ ಸ್ಥಾನದಲ್ಲಿದೆ. ನಮ್ಮ ಬೆಂಗಳೂರು ಪ್ರಪಂಚದ ಎಲ್ಲಾ ಉದ್ಯಮಗಳಿಗೆ ಬೆನ್ನೆಲುಬಾಗಿ ನಿಂತಿದೆ. ಇಷ್ಟೆಲ್ಲಾ ಹೆಸರುವಾಸಿಯಾಗಿದ್ದರೂ, ನಮ್ಮ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವ ಆಡುತ್ತಿರುವುದು ಒಂದು ದೊಡ್ಡ ವಿಪರ್ಯಾಸ....
ಕರ್ನಾಟಕದ ವಿದ್ಯಾವಂತ ಯುವಕರ ನಿರುದ್ಯೋಗ ಸಮಸ್ಯೆ ಬಗೆಹರಿಸಿ, ಕೈ ತುಂಬಾ ಸಂಬಳ ಬರುವಂತೆ ಮಾಡಲು ಹೆಚ್.ಡಿ.ಕುಮಾರಸ್ವಾಮಿ ಅವರು ಒಂದು ಐಡಿಯಾ ಮಾಡಿದ್ದಾರೆ.ಸಾಫ್ಟ್ವೇರ್ ಕಲಿಕೆಯು ಬಾಹ್ಯಾಕಾಶ-ವಿಮಾನ-ವಿಜ್ಞಾನದಷ್ಟು ಕ್ಲಿಷ್ಟಕರವಾದ ವಿಷಯವೇನಲ್ಲ. ಯಾವುದೇ ಸಾಫ್ಟ್ವೇರ್ ನಲ್ಲಿ ಬೇಸಿಕ್ ಟ್ರೇನಿಂಗ್ ಕೊಟ್ಟರೆ, ಯಾರು ಬೇಕಾದರೂ ಕೆಲವು ಸಾಫ್ಟ್ವೇರ್ ಕೆಲಸಗಳನ್ನು ಸರಾಗವಾಗಿ ಮಾಡಬಹುದು. 2018ರ ಚುನಾವಣೆಯಲ್ಲಿ ಹೆಚ್ಡಿಕೆ ಸರ್ಕಾರ ಬಂದರೆ, ನಿರುದ್ಯೋಗದಿಂದ ಬೇಸತ್ತಿರುವ ಕರ್ನಾಟಕದ ಯುವಕರಿಗೆ ಸರ್ಕಾರದ ವತಿಯಿಂದಲೇ ಸಾಫ್ಟ್ವೇರ್ ಟ್ರೇನಿಂಗ್ ಕೊಟ್ಟು, ಸರ್ಕಾರವೇ ಪ್ಲೇಸ್ಮೆಂಟ್ ಮಾಡಿಸಿ ಆ ಯುವಕರಿಗೆ ಕೆಲಸ ಕೊಡಿಸುವುದು. ಸಾಫ್ಟ್ವೇರ್ ಉದ್ಯಮದಲ್ಲಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವ ಬೆಂಗಳೂರಿನ ಪ್ರತಿಷ್ಠೆಯನ್ನು ನಮ್ಮ ನಾಡಿನ ಯುವಕರಿಗೆ ಕೆಲಸ ಕೊಡಲು ಮುಂದಾಗಿದರೆ.
Comments